ವಿಜಯವಾಣಿ ವಿಶೇಷ ಪುರವಣಿ "ಶಿರಸಿಯ ಸಿರಿದೇವಿ" ಬಿಡುಗಡೆ

Sirsi-Supliment
Published on

ಶಿರಸಿ: ಮಾರಿಕಾಂಬಾ ದೇವಿ ಜಾತ್ರೆ ಅಂಗವಾಗಿ, ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹೊರತಂದ "ಶಿರಸಿಯ ಸಿರಿದೇವಿ" ವಿಶೇಷ ಪುರವಣಿಯನ್ನು ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಎಸ್.ಶೆಟ್ಟರ್ ಬುಧವಾರ ಬಿಡುಗಡೆಗೊಳಿಸಿದರು.

ಮಾರಿಕಾಂಬಾ ದೇವಿ ಶಿರಸಿಯಲ್ಲಿ ನೆಲೆ ನಿಂತ ಬಗೆ, ದೇವಾಲಯ, ಜಾತ್ರಾ ವಿಶೇಷತೆಗಳನ್ನು ಒಳಗೊಂಡ ನಾಲ್ಕು ಪುಟಗಳ "ಶಿರಸಿಯ ಸಿರಿದೇವಿ"
ವಿಶೇಷ ಪುರವಣಿ ಶಿರಸಿ ಮಾರಿಕಾಂಬೆಯ ವಿಶೇಷ ಚಿತ್ರಗಳನ್ನು ಒಳಗೊಂಡಿದೆ. ಶಿರಸಿಯ ಮಾರಿಕಾಂಬಾ ಜಾತ್ರೆಯಲ್ಲಿ ಪ್ರಾಣಿಬಲಿ ನಿಂತ ಇತಿಹಾಸ, ದೇವಸ್ಥಾನದ ಕಾವಿಕಲೆ ವೈಶಿಷ್ಟ್ಯಗಳು, ರೋಗ ರುಜಿನಿ ನಿವಾರಕ ಮಾರಿಕಾಂಬೆಯ ಬಗ್ಗೆ ವಿಶೇಷ ವರದಿಗಳನ್ನು ಒಳಗೊಂಡಿದೆ.
ಪುರವಣಿ ಬಿಡುಗಡೆಗೊಳಿಸಿ ಮಾತನಾಡಿದ ಆರತಿ ಶೆಟ್ಟರ್, ನಾಡಿನ ಜನತೆಗೆ ಜಾತ್ರಾ ಈ ದಿನಗಳು ವಿಶೇಷವಾಗಿದೆ. ತಾಯಿ ಮಾರಿಕಾಂಬೆ ಗದ್ದುಗೆಯಲ್ಲಿ ಈಗ ಆಸೀನಾಳಾಗಿದ್ದು ಈ ಕ್ಷಣ ಕಣ್ಣುಗಳಿಗೆ ಹಬ್ಬ ಮೂಡಿಸುತ್ತಿದೆ. "ವಿಜಯವಾಣಿ" ವಿಶೇಷ ಪುರವಣಿ ಸಮಸ್ತ ಮೂಲಕ ಭಕ್ತರಿಗೆ ಕೊಡುಗೆ ನೀಡಿದೆ ಎಂದರು.
ಈ ವೇಳೆ ಬ್ಯಾಂಕ್ ಮ ಉಪ ಪ್ರಧಾನ ವ್ಯವಸ್ಥಾಪಕರಾದ ರಾಘವೇಂದ್ರ ಎ. ಪೈ, ಚೀಫ್ ಇನ್ಫರ‍್ಮೇಶನ್ ಸಿಸ್ಟಂ ಸೆಕ್ಯುರಿಟಿ ಆಫೀಸರ್ ವಿಶಾಲ ಜಿ. ದೇವಿಮನೆ, ಚೀಫ್ ಲಾ, ಎಡ್ಮಿನಿಸ್ಟ್ರೇಟಿವ್‌ ಆಫೀಸರ್ ವಿಠ್ಠಲ ಜೆ. ನಾಯಕ, ಸೀನಿಯರ್ ಸುಪ್ರವೈಸರ್ ವಿವೇಕ ಶಾನಭಾಗ, "ವಿಜಯವಾಣಿ" ಜಿಲ್ಲಾ ಜಾಹೀರಾತು ವಿಭಾಗದ ಸಹಾಯಕ ವ್ಯವಸ್ಥಾಪಕ ಶಂಕರ ಜಾವೂರ, "ವಿಜಯವಾಣಿ" ಶಿರಸಿ ತಾಲೂಕು ವರದಿಗಾರ ಮಂಜುನಾಥ ಸಾಯೀಮನೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net