More

    ಶಿರಸಿ ಜಾತ್ರೆ:- ಗದ್ದುಗೆಗೆ ಬಂದ ಮಾರಮ್ಮ

    ಶಿರಸಿ: ಅಸಂಖ್ಯ ಭಕ್ತರ ಜಯಘೋಷ, ತಾಯಿ ಮಾರಿಕಾಂಬೆಯಲ್ಲಿ ಶರಣಾಗತಿಯ ಭಾವುಕತೆಯೊಂದಿಗೆ ರಾಜ್ಯದ ಅತಿ ದೊಡ್ಡ ಜಾತ್ರೆ ಶಿರಸಿ ಮಾರಿಕಾಂಬಾ ದೇವಿ ಉತ್ಸವ ಬುಧವಾರದಿಂದ ಬೃಹತ್ ರಥೋತ್ಸವ ಆರಂಭಗೊಂಡಿತು.
    ಮಂಗಳವಾರ ರಾತ್ರಿ 11.39 ಕ್ಕೆ ದೇವಿಯ ಕಲ್ಯಾಣ ಪ್ರತಿಷ್ಠೆ ನಡೆದಿದೆ. ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ ಭಕ್ತರು ಈ ದೃಷ್ಯವನ್ನು ಕಣ್ತುಂಬಿಕೊಂಡರು.
    ಬುಧವಾರ ಬೆಳಗ್ಗೆ 7.27 ರಿಂದ ಮಾರಿಕಾಂಬಾ ದೇವಿಯ ರಥೋತ್ಸವ ಆರಂಭಗೊಂಡಿತು. ಡೊಳ್ಳು, ಕುಣಿತ, ವಾದ್ಯದೊಂದಿಗೆ ಅಸಂಖ್ಯ ಜನ ಈ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮಧ್ಯಾಹ್ನ 11.30 ರ ಸುಮಾರಿಗೆ ಮಾರಿಕಾಂಬೆಯ ರಥ ಜಾತ್ರಾ ಗದ್ದುಗೆ ಸಮೀಪ ಆಗಮಿಸಿದೆ.
    ಮಧ್ಯಾಹ್ನ ದೇವಿಯನ್ನು ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಯಿತು, ಮಾ.21 ರಿಂದ ದೇವಿಯ ದರ್ಶನ, ಸೇವೆಗಳು ಆರಂಭವಾಗಲಿವೆ.

    ಇದನ್ನೂ ಓದಿ: ಶಿರಸಿ ಮಾರಿಕಾಂಬಾ ಜಾತ್ರೆ:-ಡಾ.ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ನಿಂದ ವಿಶೇಷ ಸಂಚಿಕೆ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts