More

    ಮತದಾನ ಜಾಗೃತಿ ಪಾದಯಾತ್ರೆಯಲ್ಲಿ ಅಂಗವಿಕಲ ಮಕ್ಕಳು

    ಶಿರಸಿ: ನಗರದ ಮರಾಠಿಕೊಪ್ಪದಲ್ಲಿ ಅಜಿತ ಮನೋಚೇತನಾ ಸಂಸ್ಥೆಯಲ್ಲಿ ವಾರ್ಷಿಕ ಸಮ್ಮಿಲನ ಮತ್ತು ಮತದಾನ ಜಾಗೃತಿ ಪಾದಯಾತ್ರೆ ಇತ್ತೀಚೆಗೆ ನಡೆಯಿತು.

    ಉಪವಿಭಾಗಾಧಿಕಾರಿ ಅಪರ್ಣಾ ರಮೇಶ ಪಾದಯಾತ್ರೆಗೆ ಚಾಲನೆ ನೀಡಿದರು. ಬೀದಿಗಳಲ್ಲಿ ನಾಮಫಲಕ ಹಿಡಿದ ಅಂಗವಿಕಲ ಮಕ್ಕಳು, ಮಹಿಳೆಯರು, ಸಾಮಾಜಿಕ ಕಾರ್ಯಕರ್ತರು ಪಾದಾಯಾತ್ರೆ ನಡೆಸಿ ಗಮನ ಸೆಳೆದರು. ಅಜಿತ ಮನೋಚೇತನಾ ಮುಖ್ಯ ಶಿಕ್ಷಕಿ ನರ್ಮದಾ ಹೆಗಡೆ ಮತದಾನ ಪ್ರತಿಜ್ಞಾವಿಧಿ ಬೋಧಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ವೀಣಾ ಸಿರ್ಸಿಕರ ಸ್ವಾಗತಿಸಿದರು. ಜಾಥಾದಲ್ಲಿ ಅನಂತ ಹೆಗಡೆ ಆಶೀಸರ, ಸುಧೀರ ಭಟ್, ಗೋಪಾಲಜೀ, ಭಾರತಿ ಹೊನ್ನೆಗದ್ದೆ ಹಾಗೂ ನಗರಸಭೆ, ತಾಲೂಕು ಪಂಚಾಯಿತಿ ಅಧಿಕಾರಿಗಳು ಪಾಲ್ಗೊಂಡರು.

    ಬಳಿಕ ವಿಕಾಸ ಶಾಲಾ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಡಾ. ಭಾಸ್ಕರ ಸ್ವಾದಿ ಟ್ರಸ್ಟ್ ಅಧ್ಯಕ್ಷ ಉದಯ ಸ್ವಾದಿ, ಹಿರಿಯ ಸಾಮಾಜಿಕ ಕಾರ್ಯಕರ್ತ ವಿ.ಆರ್. ಹೆಗಡೆ ಹೊನ್ನೆಗದ್ದೆ ಅವರನ್ನು ಸನ್ಮಾನಿಸಲಾಯಿತು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಧೀರ ಭಟ್ ಸಾಧನೆ ಮಾಡಿದ ವಿಶೇಷ ಮಕ್ಕಳಿಗೆ ಪ್ರಶಸ್ತಿ ನೀಡಿದರು. ಆಯುಷ್ ವೈದ್ಯಾಧಿಕಾರಿ ಡಾ. ಜಗದೀಶ ಯಾಜಿ ಚಿಕ್ಕ ವಯಸ್ಸಿನಲ್ಲಿ ಅಂಗವಿಕಲತೆ ಕಡಿಮೆ ಮಾಡಲು ಸಾಧ್ಯ, ಸತತ ಪ್ರಯತ್ನ ಬೇಕು. ಅಜಿತ ಮನೋಚೇತನ ನಮ್ಮಲ್ಲರನ್ನು ಕೂಡಿಸಿ ಪ್ರಯತ್ನ ನಡೆಸುತ್ತಿದೆ ಎಂದು ಶ್ಞಾಘಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts