More

    ವೃತ್ತಿಯಿಂದ ಸಾಮಾಜಿಕ ಸ್ಥಾನಮಾನ ಲಭ್ಯ

    ಚಿತ್ರದುರ್ಗ:ವೃತ್ತಿ ಸಾಧನೆ ಇಂಪೋಸ್ಟರ್ ಸಿಂಡ್ರೋಮ್ ನಿವಾರಣೆಗೆ ಸಹಕಾರಿ ಎಂದು ಬೆಂಗಳೂರು ಏಸ್ ಡಿಸೈನರ್ಸ್‌ ಲಿಮಿಟೆಡ್‌ನ ಕೈಗಾರಿಕಾ ಉತ್ಪಾದನಾ ಸಲಹೆಗಾರ ಕಾಶಿನಾಥ್ ಎಂ.ಪಟ್ಟಣಶೆಟ್ಟಿ ಹೇಳಿದರು.
    ನಗರದ ಎಸ್‌ಜೆಎಂ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ‘ಸುಸ್ಥಿರತೆ ಮತ್ತು ಪ್ರಗತಿ ಸಾಧನೆಗೆ ಯುವ ಜನತೆಯನ್ನು ಪ್ರೇರೇಪಿಸುವುದು ಮತ್ತು ತೊಡಗಿಸಿಕೊಳ್ಳುವ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
    ವೃತ್ತಿಪರತೆ ಜಾಗೃತಿ, ಚಿಕ್ಕಪುಟ್ಟ ಉದ್ಯೋಗ ಚಟುವಟಿಕೆಗಳು, ಕೌಶಲ, ಬುದ್ಧಿಮತ್ತೆ ಮತ್ತಿತರ ವಿಷಯಗಳೆಡೆ ವಿದ್ಯಾರ್ಥಿಗಳಲ್ಲಿರುವ ಅನುಮಾನಗಳನ್ನು ಹೋಗಲಾಡಿಸುತ್ತವೆ. ಪ್ರಸ್ತುತ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಯುವ ಜನರು ಇಂಪೋಸ್ಟರ್ ಸಿಂಡ್ರೋಮ್‌ಗೆ ಒಳಗಾಗುವುದು ಸಾಮಾನ್ಯವಾಗಿದೆ ಎಂದರು.
    ಪ್ರತಿಯೊಬ್ಬರು ತಮ್ಮ ವೃತ್ತಿಯಲ್ಲಿ ಗುರುತಿಸಿಕೊಂಡು ಸಂತೋಷಪಡಬೇಕು. ವೃತ್ತಿ ವ್ಯಕ್ತಿಗೆ ಜೀವನೋಪಾಯ, ಆರ್ಥಿಕ ಸ್ಥಿತಿ, ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಸ್ಥಾನಮಾನ ನೀಡುತ್ತದೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ಎಚ್. ಪಂಚಾಕ್ಷರಿ ಮಾತನಾಡಿದರು. ಪ್ರೊ. ಎಲ್. ಶ್ರೀನಿವಾಸ್, ಡಾ.ಎ. ಹರ್ಷವರ್ಧನ್, ಪ್ರೊ.ಎಸ್.ಆನಂದ್, ಪ್ರೊ.ಎಚ್.ಎಂ. ಮಂಜುನಾಥಸ್ವಾಮಿ ಮತ್ತಿತರರು ಇದ್ದರು. ಕಾವ್ಯಾ ಪ್ರಾರ್ಥಿಸಿದರು. ಪ್ರೊ. ಆರ್.ಕೆ. ಕೇದಾರನಾಥ್ ಸ್ವಾಗತಿಸಿ, ಪ್ರೊ.ಬಿ.ಎಂ. ಸ್ವಾಮಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts