More

    ಮಕ್ಕಳಿಗೆ ವಿದ್ಯೆ ಜತೆಗೆ ಸಂಸ್ಕಾರ ಕಲಿಸಿ

    ಚಿಕ್ಕಮಗಳೂರು: ಮಕ್ಕಳಿಗೆ ವಿದ್ಯೆ ನೀಡುವ ಜತೆಗೆ ಉತ್ತಮ ಪ್ರಜೆಗಳನ್ನಾಗಿಸಲು ಸಂಸ್ಕಾರ ಕಲಿಸಬೇಕು ಎಂದು ಶ್ರೀ ದೇವೀರಮ್ಮ ವಿದ್ಯಾಸಂಸ್ಥೆ ಅಧ್ಯಕ್ಷ ಜೆ.ಎಸ್.ರುದ್ರಮೂರ್ತಿ ತಿಳಿಸಿದರು.

    ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಮಕ್ಕಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯ, ಕೌಶಲ, ಶಿಸ್ತು, ಸಂಸ್ಕಾರ, ಸ್ವಾವಲಂಬನೆ ಹಾಗೂ ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೂರಕವಾದಂತಹ ಶೈಕ್ಷಣಿಕ, ದೈಹಿಕ, ಸಾಮಾಜಿಕ, ಮಾನಸಿಕ, ಸದೃಢವಾದ ನೈತಿಕ ಬೆಳವಣಿಗೆಗೆ ಸಹಕಾರಿಯಾಗುವಂಥ ವಾತಾವರಣವನ್ನು ಪಾಲಕರು ಕಲ್ಪಿಸಬೇಕು ಎಂದು ಹೇಳಿದರು.
    ಬಿಂಡಿಗ ಗ್ರಾಪಂ ಅಧ್ಯಕ್ಷೆ ಸುನೀತಾ ಸ್ವಾಮಿ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ ಪ್ರಮುಖವಾಗಿರುತ್ತದೆ. ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
    ಗ್ರಾಪಂ ಸದಸ್ಯ ದಿನೇಶ್ ಮಾತನಾಡಿ, ಶಾಲೆಗಳಲ್ಲಿ ವಾರ್ಷಿಕೋತ್ಸವ ಆಚರಿಸುವುದರಿಂದ ವಿದ್ಯಾರ್ಥಿಗಳು ಪ್ರತಿಭೆ ಹೊರಹಾಕಲು ಸಹಕಾರಿ ಎಂದು ತಿಳಿಸಿದರು.
    ಗ್ರಾಪಂ ಸದಸ್ಯರಾದ ಸಂದೀಪ್, ಯತೀಶ್, ದಿಲೀಪ್, ಪಲ್ಲವಿ, ಕಾವ್ಯಾ, ಪ್ರೇಮಾ, ಪಿಡಿಒ ಸುಶ್ಮಿತಾ ಗೌಡ, ಸಿಎಂಎಸ್‌ಎಸ್‌ಎಸ್ ಸಂಸ್ಥೆ ಸಂಯೋಜಕಿ ಪ್ರಮೀಳಾ, ಶಿಕ್ಷಕರಾದ ಜ್ಯೋತಿ, ಪಲ್ಲವಿ, ಅನಿತಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts