More

    ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ

    ರಿಪ್ಪನ್‌ಪೇಟೆ: ಬ್ರಾಹ್ಮಣರು ಎಂದರೆ ದೇವರ ಸೇವಕರು. ಪ್ರತಿನಿತ್ಯ ಸಂಧ್ಯಾವಂದನೆ, ಜಪ, ನಿತ್ಯಪೂಜೆ, ಭಜನೆಗಳನ್ನು ಮಾಡುವುದು ನಮ್ಮೆಲ್ಲರ ಕತರ್ವ್ಯ ಎಂದು ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧಿಪತಿಗಳಾದ ಶ್ರೀ ವಿದ್ಯಾಧೀಶ ಶ್ರೀಪಾದ ಸ್ವಾಮೀಜಿ ತಿಳಿಸಿದರು.
    ಗುರುವಾರ ಪಟ್ಟಣದ ಗೌಡ ಸಾರಸ್ವತ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಮಾಧ್ವ ಬ್ರಾಹ್ಮಣರಾಗಿ ಹರಿನಾಮ ಸ್ಮರಣೆೆ ಮಾಡುವುದು ನಮ್ಮ ಹಕ್ಕು. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ನಮ್ಮ ಆಚರಣೆಯ ಸಂಸ್ಕಾರವನ್ನು ನೀಡುವುದರ ಜತೆಗೆ ಮೌಲ್ಯಯುತ ಶಿಕ್ಷಣ ನೀಡಿದಾಗ ಸಮಾಜ ಅಭಿವೃದ್ಧಿ ಸಾಧ್ಯ ಎಂದರು.
    ದೈನಂದಿನ ಬದುಕಿನಲ್ಲಿ ಎಷ್ಟೇ ಒತ್ತಡಗಳಿದ್ದರೂ ನಮ್ಮ ಪುರಾತನ ಸಂಸ್ಕಾರವನ್ನು ಮರೆಯಬಾರದು. ನಿಸ್ವಾರ್ಥ ಮನೋಭಾವದಿಂದ ದಾನ, ಧರ್ಮಾಧಿಗಳನ್ನು ಮಾಡಬೇಕು. ದೇವರು ನೀವು ಎಷ್ಟು ನೀಡಿದ್ದೀರಿ? ಏನನ್ನು ಕೊಟ್ಟಿದ್ದೀರಿ ಎಂಬುದನ್ನು ನೋಡುವುದಿಲ್ಲ. ಬದಲಾಗಿ ಅರ್ಪಿಸುವಾತನು ಯಾವ ಭಾವನೆಯಲ್ಲಿ ಅರ್ಪಿಸಿದ್ದಾನೆಂದು ನೋಡುತ್ತಾನೆ. ಆದ್ದರಿಂದ ಸಮಾಜ ಬಾಂಧವರು ಮಾನವ ಸೇವೆಯೇ ಮಾಧವನ ಸೇವೆ ಎಂದು ತಿಳಿದು ಕಷ್ಟದಲ್ಲಿದ್ದವರ ನೆರವಾಗುವಂತೆ ಕಿವಿಮಾತು ಹೇಳಿದರು.
    ಸಮಾಜದ ಅಧ್ಯಕ್ಷ ಗಣೇಶ್ ಕಾಮತ್, ಮಾಜಿ ಅಧ್ಯಕ್ಷರಾದ ಮಂಜುನಾಥ ಕಾಮತ್, ಉಮೇಶ ಭಟ್, ಹರೀಶ್ ಸರಾಫ್, ಹರೀಶ ಪ್ರಭು, ರಾಜೇಶ್ ಪ್ರಭು, ಅನಂತಮೂರ್ತಿ ಜವಳಿ, ಡಿ. ನರಸಿಂಹ ಕಾಮತ್, ರಾಮದಾಸ ಭಟ್, ಕಿಶನ್ ಭಟ್, ರಮೇಶ ಶಣೈ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts