12ರಿಂದ ಬಾಲ ವಿಕಾಸ ಶಿಬಿರ

camp 22
Published on

ಮೂಲ್ಕಿ: ಪುನರೂರು ಪ್ರತಿಷ್ಠಾನ ಆಶ್ರಯದಲ್ಲಿ ಜನ ವಿಕಾಸ ಸಮಿತಿ ಮೂಲ್ಕಿ ಸಹಕಾರದಲ್ಲಿ ಬಾಲ ವಿಕಾಸ ಶಿಬಿರ-2024(ಮಕ್ಕಳ ಬೌದ್ಧಿಕ ಬೆಳವಣಿಗೆಗಾಗಿ ಉಚಿತ ಬೇಸಿಗೆ ಶಿಬಿರ) ಮೇ 12ರಿಂದ 19ರವರೆಗೆ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಸಭಾಂಗಣದಲ್ಲಿ ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ನಡೆಯಲಿದೆ.

ಯೋಗ ತರಬೇತಿಯನ್ನು ಯೋಗ ಶಿಕ್ಷಕ ಜಯ ಮುದ್ದು ಶೆಟ್ಟಿ, ಅಭಿನಯ ತರಬೇತಿಯನ್ನು ರಂಗ ನಟ, ನಿರ್ದೇಶಕ ತಾರನಾಥ್ ಉರ್ವ, ಶ್ಲೋಕ ಕಂಠಪಾಠವನ್ನು ಶಿಮಂತೂರು ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲ ಜಿತೇಂದ್ರ ವಿ.ರಾವ್ ಹೆಜಮಾಡಿ, ಭಜನೆಯನ್ನು ಗಾಯಕ ಸುರೇಶ್ ಆಚಾರ್ಯ ಹಳೆಯಂಗಡಿ, ಆವೆಮಣ್ಣಿನ ಕಲಾಕೃತಿ ರಚನೆ ಮತ್ತು ಕರಕುಶಲ ತರಬೇತಿಯನ್ನು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೆಂಕಿ ಫಲಿಮಾರ್ ನೀಡಲಿದ್ದಾರೆ ಎಂದು ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಹಾಗೂ ಜನ ವಿಕಾಸ ಸಮಿತಿ ಮೂಲ್ಕಿ ಅಧ್ಯಕ್ಷ ಶಶಿಕರ ಕೆರೆಕಾಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net