ಕಲೆಗಳಿಂದ ಬದುಕಿನಲ್ಲಿ ನೆಮ್ಮದಿ, ಸಂತಸ : ಸುಬ್ರಾಯ ಚೊಕ್ಕಾಡಿ ಅನಿಸಿಕೆ

18
Published on

ಸುಳ್ಯ: ಕಲೆ, ಸಂಸ್ಕೃತಿ, ಸಾಹಿತ್ಯದಿಂದ ಜೀವನದಲ್ಲಿ ನೆಮ್ಮದಿ, ಸಂತೋಷ ಪಡೆಯಲು ಸಾಧ್ಯ ಎಂದು ಕವಿ ಸುಬ್ರಾಯ ಚೊಕ್ಕಾಡಿ ಹೇಳಿದರು.

ಸುಳ್ಯದ ರಂಗಮಯೂರಿ ಕಲಾ ಶಾಲೆ ವತಿಯಿಂದ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನ ಸಭಾಂಗಣದಲ್ಲಿ ರಾಜ್ಯಮಟ್ಟದ ರಂಗ ಶೈಲಿಯ ಮಕ್ಕಳ ಬೇಸಿಗೆ ಶಿಬಿರ ‘ಬಣ್ಣ’ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಕಮಿಟಿ ‘ಬಿ’ ಘಟಕದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ., ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ರಾಜ್ಯ ಪ್ರಶಸ್ತಿ ಪುರಸ್ಕೃತ ಅಂಗನವಾಡಿ ಕಾರ್ಯಕರ್ತೆ ಲತಾ ಅಂಬೆಕಲ್ಲು, ರ‌್ಯಾಂಕ್ ವಿಜೇತ ಕಲಾವಿದೆ ವೈಷ್ಣವಿ ಶೆಟ್ಟಿ ಮಾತನಾಡಿದರು. ರಂಗಮಯೂರಿ ಕಲಾ ಶಾಲೆ ನಿರ್ದೇಶಕ ಲೋಕೇಶ್ ಊರುಬೈಲು ಉಪಸ್ಥಿತರಿದ್ದರು. ಅಕ್ಷತ್ ಅಜ್ಜಾವರ ಸ್ವಾಗತಿಸಿದರು. ರಂಗಮಯೂರಿ ಕಲಾ ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಧೃತಿ ದೀಟಿಗೆ ವಂದಿಸಿದರು. ಸಿಂಚನಾ ಪುತ್ತಿಲ ಮತ್ತು ಶಶಿಕಾಂತ್ ಮಿತ್ತೂರು ನಿರೂಪಿಸಿದರು.

ಸನ್ಮಾನ, ನಾಟಕ ಪ್ರದರ್ಶನ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 6 ನೇ ರ‌್ಯಾಂಕ್ ಪಡೆದ ವಿದ್ಯಾರ್ಥಿನಿ ವೈಷ್ಣವಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ ಆರು ಭಾಷೆಯಲ್ಲಿ ಕಲಿಸಲಾದ ವಿಭಿನ್ನ ನಾಟಕಗಳು ಪ್ರದರ್ಶನಗೊಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net