

ಕಾಸರಗೋಡು: ಮಂಜೇಶ್ವರ ಕೀರ್ತೇಶ್ವರ ಶ್ರೀ ಸದಾಶಿವ ದೇವರ ಹಾಗೂ ಪರಿವಾರ ದೇವರುಗಳಿಗೆ ದೃಢಕಲಶ ಕಾರ್ಯಕ್ರಮ ಜರುಗಿತು.
ಬಡಾಜೆ ಗೋಪಾಲಕೃಷ್ಣ ತಂತ್ರಿ ನೇತೃತ್ವದಲ್ಲಿ ಶ್ರೀ ಕೀರ್ತೇಶ್ವರ ಸದಾಶಿವ ದೇವರು ಹಾಗೂ ಪರಿವಾರ ದೇವರುಗಳಿಗೆ ದೃಢಕಲಶ ನೆರವೇರಿಸಲಾಯಿತು. ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರಮದಾನ ಮಾಡಿವರನ್ನು ಅಭಿನಂದಿಸಲಾಯಿತು.
ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ತುಕಾರಾಮ ಕುಂಬ್ಳೆ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಗಾಣಿಗ ಸಂಘ ನಿರ್ದೇಶಕ ಭಾಸ್ಕರ್ ಎಡಪದವು ಸಂಪಾದಿಸಿದ ಸಫಲ ತ್ರೈಮಾಸಿಕ ಪತ್ರಿಕೆಯನ್ನು ಮೋಹನ್ ಶೆಟ್ಟಿ ತೂಮಿನಾಡು ಬಿಡುಗಡೆಗೊಳಿಸಿದರು. ಪ್ರಮುಖರಾದ ವಿಶ್ವನಾಥ ಪೊಯ್ಯೆಕಂಡ, ಕೆ.ಕೆ.ಶೆಟ್ಟಿ, ದಯಾನಂದ ಬಂಗೇರ, ಭಾಸ್ಕರ್ ಎಡಪದವು, ಪ್ರದೀಪ್ ಅಂಜರೆ, ವಿಜಯ ಕುಮಾರ್ ಶಿವಪಾಲ್, ದಿನೇಶ್ ನಟ್ಟಿಬೈಲ್, ಶೈಲೇಶ್, ಕೀರ್ತೇಶ್, ರೇವತಿ ಶೈಲೇಶ್, ಶೈಲೇಶ್ ಅನುಗ್ರಹ ಮೊದಲಾದವರಿದ್ದರು.
ಹರೀಶ್ಚಂದ್ರ ಮಂಜೇಶ್ವರ ಸ್ವಾಗತಿಸಿದರು. ಉದಯಕುಮಾರ್ ಆನೆಬಾಗಿಲು ವಂದಿಸಿದರು.