ಸುಖ ದುಖಃಗಳ ಸಮ್ಮಿಲನ ಸಮಾಜ ಸಂಘಟನೆ

23 RON 1- mattigatti
Published on

ರೋಣ: ಸಮಾಜ ಸಂಘಟನೆ ಎಂಬುದು ಹೂವಿನ ಹಾಸಿಗೆ ಅಲ್ಲ, ಸಮಾಜ ಸಂಘಟನೆ ಸುಖ ದುಖಃಗಳ ಸಮ್ಮಿಲನವಾಗಿದೆ. ಸಂಘಟನೆಯ ವೇಳೆ ಎಚ್ಚರಿಕೆಯಿಂದ ಇನ್ನೊಂದು ಸಮಾಜದ ಭಾವನೆಗೆ ಧಕ್ಕೆಯಾಗದಂತೆ ಬಣಜಿಗ ಸಮಾಜ ಸಂಘಟನೆಯಾಗಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾ ಸಭಾಪತಿ ವೀರಣ್ಣ ಮತ್ತಿಕಟ್ಟಿ ಹೇಳಿದರು.


ಭಾನುವಾರ ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ರೋಣ ತಾಲೂಕು ಮಟ್ಟದ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ 30ನೇ ವಾರ್ಷಿಕ ಸರ್ವ ಸಾಧಾರಣ ಸಭೆ, ಎಸ್​ಎಸ್​ಎಲ್​ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.


ಬಣಜಿಗ ಸಮಾಜ ಮೊದಲಿನಿಂದಲೂ ಬಸವಾದಿ ಶರಣರ ಆದರ್ಶಗಳನ್ನುಅಳವಡಿಸಿಕೊಂಡು ಬಂದಿದೆ. ಪ್ರಮುಖವಾಗಿ ಲಿಂಗಾಯತ ಧರ್ಮದ ವಿಭೂತಿ, ಲಿಂಗಪೂಜೆಗಳನ್ನು ಯುವಕರು ಜೀವನದಲ್ಲಿ ಅಳವಡಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.


ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು.


ಸಮಾಜದ ಅಧ್ಯಕ್ಷ ಮುತ್ತಣ್ಣ ಸಂಗಳದ, ಮಿಥುನ್ ಪಾಟೀಲ, ಶೇಖಣ್ಣ ಅಳಗವಾಡಿ, ಮೆಣಸಿನಕಾಯಿ, ಶರಣಪ್ಪ ಜಕ್ಕಲಿ, ವೀರಣ್ಣ ಶೆಟ್ಟರ, ಸೋಮಲಿಂಗಪ್ಪ ಚರೇದ, ಜಿ.ಎ. ಪಟ್ಟಣಶೆಟ್ಟಿ, ಶರಣಪ್ಪ ಜಕ್ಕಲಿ, ಸಂಗಪ್ಪ ಅಂಗಡಿ, ಮುತ್ತಣ್ಣ ಕಡಗದ, ಚೆನ್ನಮ್ಮಲ್ಲಪ್ಪ ಗದಗಿನ, ವಿಜಯಲಕ್ಷ್ಮೀ ಕೊಟಗಿ, ಆನಂದ ಚಂಗಳಿ, ಹುಚ್ಚೇಶ ಜವಳಿ, ಶೇಖಣ್ಣ ಐಹೊಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net