ಠಾಣೆಯ ಎದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

Bhaskar dabolkar
Published on

ಜೊಯಿಡಾ: ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯ ಮುಂದೆ ಬೆಂಕಿ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ರಾತ್ರಿ ಜೊಯಿಡಾ ತಾಲೂಕಿನ ರಾಮನಗರದಲ್ಲಿ‌ ನಡೆದಿದೆ.

ಬಾಸ್ಕರ ಬಾಂಡೋಲ್ಕರ ಎನ್ನುವ ರಾಮನಗರದ ವ್ಯಕ್ತಿ ಗುರುವಾರ ಆತ್ಮಹತ್ಯೆಗೆ ಪ್ರಯತ್ನಿಸಿದವರು.
ರಾಮನಗರ ಪಿಎಸ್ ಐ ಕಿರುಕುಳದಿಂದ ನಾನು ಬೆಂಕಿ ಹಾಕಿಕೊಂಡಿರುವುದಾಗಿ ಈ ವ್ಯಕ್ತಿ ವಿಡಿಯೋ ಮಾಡಿ ಹರಿ ಬಿಟ್ಟಿದ್ದು ಸಾಮಾಜಿಕ ಜಾಲತಾಣದಲ್ಲಿ ಬಂದಿದೆ.

5 ತಿಂಗಳ ಹಿಂದೆ ಜೂಜು ಆಡಲು ಕುಳಿತಾಗ ರಾಮನಗರ ಪಿಎಸ್ ಐ ದಾಳಿ ನಡೆಸಿ 3 ಲಕ್ಷ 65 ಸಾವಿರ ರೂ. ವಶಕ್ಕೆ ಪಡೆದರು

ಆದರೆ, ಮರುದಿನ ಪತ್ರಿಕೆಗಳಲ್ಲಿ 36 ಸಾವಿರ ಮಾತ್ರ ವಶಕ್ಕೆ ಪಡೆದಿರುವುದಾಗಿ ಹೇಳಿಕೆ ನೀಡಿದರು. ಈ ಸಂಬಂಧ ಎಸ್ ಪಿ ಅವರಿಗೆ ದೂರು ನೀಡಿದ್ದೆ. ಅವರು ದಾಂಡೇಲಿ ಡಿವೈಎಸ್ ಪಿ ಅವರನ್ನು ಭೇಟಿಯಾಗಲು ಹೇಳಿದರು. ದಾಂಡೇಲಿ ಡಿವೈಎಸ್ ಪಿ ಅವರಿಗೆ ಮನವಿ ಸಲ್ಲಿಸಿದೆ. ಆದರೆ, ಅವರು, ಮನವಿಗೆ ರಿಸೀವ್ಡ್ ಮಾಡಿಕೊಡಲು ಸಿದ್ಧರಿರಲ್ಲ. ಅದಾದ ನಂತರ‌ ಪಿಎಸ್ ಐ ನನಗೆ ಸಾಕಷ್ಟು ಕಿರುಕುಳ ನೀಡಿದರು ಎಂದು ವ್ಯಕ್ತಿ ಸುಟ್ಟುಕೊಂಡ ನಂತರ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳುವಾಗ ವಿಡಿಯೋದಲ್ಲಿ ಹೇಳಿದ್ದಾರೆ.

ವ್ಯಕ್ತಿಯನ್ನು ಬೆಳಗಾವಿ ಆಸ್ಪತ್ರೆಗೆ ಸೇರಿಸಲಾಗಿದೆ. ಎಸ್.ಪಿ.ಎನ್.ವಿಷ್ಣುವರ್ಧನ ರಾಮನಗರ ಠಾಣೆಗೆ ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net