

ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ತೂಮಿನಾಡು ಕುಚ್ಚಿಕ್ಕಾಡಿನ ಅಪಾರ್ಟ್ಮೆಂಟ್ನ ನಿವಾಸಿ ಕೆ.ಎಚ್ ಮಹಮ್ಮದ್ ಎಂಬುವರ ಪುತ್ರ ಮಹಮ್ಮದ್ ಅನ್ಸರ್(32)ನೇಣು ಬಿಗಿದುಕೊಂಡು ಆತ್ಮಹತ್ಯೆಗೈದಿದ್ದಾರೆ. ಚಾಲಕರಾಗಿ ದುಡಿಯುತ್ತಿದ್ದ ಅವರು, ಐದು ತಿಂಗಳ ಹಿಂದೆಯಷ್ಟೆ ವಿದೇಶಕ್ಕೆ ತೆರಳಿದ್ದು, ಎರಡು ವಾರದ ಹಿಂದೆ ಊರಿಗೆ ವಾಪಸಾಗಿದ್ದರು. ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.