ಪತಿಯ ಕಿರುಕುಳದಿಂದ ಆತ್ಮಹತ್ಯೆ

7hnr2 (Chetana Gouda)
Published on

ಹೊನ್ನಾವರ: ತಾಲೂಕಿನ ಖರ್ವಾ ಗ್ರಾಮದ ಹಸಿಮನೆಯಲ್ಲಿ ವಿಷ ಸೇವಿಸಿ ಗುರುವಾರ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿಗೆ ಪತಿಯ ಕಿರುಕುಳ ಕಾರಣ ಎಂದು ತವರು ಮನೆಯವರು ದೂರು ಸಲ್ಲಿಸಿದ್ದಾರೆ. ಖರ್ವಾ ಹಸಿಮನೆಯ ಚೇತನಾ ವಿಷ್ಣು ಗೌಡ (28) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ತನ್ನ ತಂಗಿಯು ಎಂ.ಕಾಂ ಪದವೀಧರೆ ಆಗಿದ್ದಾಳೆ. ಆಕೆಯ ಪತಿ ವಿಷ್ಣು ಮದ್ಯ ವ್ಯಸನಿಯಾ ಗಿದ್ದು ಪ್ರತಿನಿತ್ಯವು ದೈಹಿಕವಾಗಿ ಕಿರುಕುಳ ನೀಡಿ ಮಾನಸಿಕವಾಗಿ ಒತ್ತಡ ತರುತ್ತಿದ್ದನು. ಇದರಿಂದಲೇ ಆತ್ಮಹತ್ಯೆಗೆ ಯತ್ನಿಸಿದ್ದು ತಂಗಿ ಸಾವಿಗೆ ಪತಿ ವಿಷ್ಣು ಕಾರಣ ಎಂದು ಮೃತಳ ಸಹೋದರ ಸುಬ್ರಹ್ಮಣ್ಯ ಹೊನ್ನಾವರ ಠಾಣಿಯಲ್ಲಿ ಪ್ರಕರಣ ದಾಖಲಿಸಿ ದ್ದಾರೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ವಿಷ್ಣು ಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net