

ಕುಂದಾಪುರ: ಕರ್ಕುಂಜೆ ಗ್ರಾಮದ ನೇರಳಕಟ್ಟೆ ಕೌಂಜೂರಿನಲ್ಲಿ ಗಂಡನ ಹಿಂಸೆ ತಾಳಲಾರದೆ ವಿವಾಹಿತ ಮಹಿಳೆಯೋರ್ವಳು ಜು.17ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಒಂದೂವರೆ ತಿಂಗಳ ಬಳಿಕ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರ್ಕುಂಜೆ ಗ್ರಾಮದ ನೇರಳಕಟ್ಟೆ ಕೌಂಜೂರಿನ ಅಬ್ದುಲ್ ರೆಹಮಾನ್ ಎಂಬುವರು ಸಾಗರದ ಅಲ್ಫಾ ಎ. (28) ಎಂಬುವರನ್ನು 2021ರ ನ. 18ರಂದು ಮದುವೆಯಾಗಿದ್ದರು. ರೆಹಮಾನ್ ಮದುವೆ ಪೂರ್ವದಲ್ಲೇ ಬೇರೊಂದು ಹುಡುಗಿಯನ್ನು ಪ್ರೀತಿಸುತ್ತಿದ್ದು ಈ ವಿಚಾರ ಪತ್ನಿ ಅಲ್ಫಾ ಗೆ ತಿಳಿದು ಪತಿ ರೆಹಮಾನ್ ಅವರನ್ನು ಪ್ರಶ್ನಿಸಿದಕ್ಕೆ ಅಲ್ಫಾ ಗೆ ಮಾನಸಿಕ ಹಿಂಸೆ ನೀಡಲಾರಂಭಿಸಿದ್ದರು. ಗಂಡನ ಹಿಂಸೆ ಸಹಿಸಲಾಗದೆ ಮನನೊಂದು ಗಂಡನ ಮನೆಯಲ್ಲಿ ಜುಲೈ 17ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸೆ.10ರಂದು ಕುಂದಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ.