ನೇಣು ಬಿಗಿದು ಮಹಿಳೆ ಸಾವು

suicide
Published on

ಗಂಗೊಳ್ಳಿ: ಕೊರವಡಿಯ ಹಳೆಕಟ್ಟು ಎಂಬಲ್ಲಿ ಸೌಜನ್ಯಾ ಎಂಬುವರು ಶನಿವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ.

ಕುಂಭಾಶಿ ಗ್ರಾಮದ ಸೌಜನ್ಯಾ ಅವರನ್ನು ಹಳೆಕಟ್ಟು ಕೊರವಾಡಿ ನಿವಾಸಿ ಜಗದೀಶ್ ಎಂಬುವರಿಗೆ 3 ವರ್ಷದ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಒಂದೂವರೆ ವರ್ಷದ ಹೆಣ್ಣು ಮಗು ಇದೆ. ಏ.27ರಂದು ರಾತ್ರಿ 9ಕ್ಕೆ ಸೌಜನ್ಯಾ ಸೋದರ ಮಾವ ಉದಯ ಅವರಿಗೆ ಕರೆಮಾಡಿ, ಪತಿ ಜಗದೀಶ್, ಅತ್ತೆ ಶ್ಯಾಮಲಾ, ನಾದಿನಿಯವರಾದ ಶೋಭಾ ಮತ್ತು ಶ್ಯಾಮಲಾ ಹಾಗೂ ಮೈದುನ ಪುಂಡಲೀಕ ಹಿಂಸೆ ನೀಡುತ್ತಿದ್ದಾರೆ ಎಂದು ಹೇಳಿದ್ದರು. ಬಳಿಕ ರಾತ್ರಿ 9.45ಕ್ಕೆ ಮತ್ತೆ ಕರೆ ಮಾಡಿ ಪತಿ ಹೊಡೆದು ಹಿಂಸೆ ನೀಡುತ್ತಿದ್ದಾರೆ ಎಂದಿದ್ದರು. ಉದಯ ಅವರು ಜಗದೀಶ್ ಮನೆಗೆ ಹೋಗಿದ್ದು, ಈ ಸಂದರ್ಭ ಜಗದೀಶ್ ಸೌಜನ್ಯಾರನ್ನು ಭಾನುವಾರ ತವರು ಮನೆಗೆ ಬಿಟ್ಟು ಹೋಗುವುದಾಗಿ ತಿಳಿಸಿದ್ದರು. ಭಾನುವಾರ ರಾತ್ರಿ ಜಗದೀಶ್ ಕರೆ ಮಾಡಿದಂತೆ ಉದಯ ಅವರು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ತೆರಳಿದಾಗ ಸೌಜನ್ಯಾ ಮೃತದೇಹ ಕಂಡು ಬಂದಿದೆ.

ಸೌಜನ್ಯಾ ಸಾವಿಗೆ ಪತಿ ಮನೆಯವರ ಮಾನಸಿಕ ಹಾಗೂ ದೈಹಿಕ ಕಿರುಕುಳ ಕಾರಣ ಎಂದು ಎಂದು ಸಂದೀಪ್ ಎಂಬುವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net