ವಿವಾಹ ನಿಶ್ಚಿತಾರ್ಥ ನಡೆದಿದ್ದ ಯುವತಿ ನೇಣಿಗೆ ಶರಣು

Suicide
Published on

ಕಾಸರಗೋಡು: ವಿವಾಹ ನಿಶ್ಚಿತಾರ್ಥ ನಡೆದಿದ್ದ ಯುವತಿ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಮುಂಡಿತ್ತಡ್ಕ ಬಿ.ಸಿ ರೋಡ್ ಪಾಡ್ಲಡ್ಕ ನಿವಾಸಿ ದಿ.ಮಂಜನಾಡಿ ಮೊಯ್ದೀನ್‌ಕುಞಿ ಎಂಬುವರ ಪುತ್ರಿ ಫಾತಿಮತ್ ಅಲ್ಫೀನಾ(22)ಮೃತಪಟ್ಟ ಯುವತಿ.

ಮಂಗಳವಾರ ಮನೆಯ ಬೆಡ್‌ರೂಮ್‌ನೊಳಗೆ ತೆರಳಿದ್ದ ಫಾತಿಮತ್ ಅಲ್ಫೀನಾ ಬಹಳ ಹೊತ್ತಿನವರೆಗೂ ವಾಪಸಾಗದಿರುವುದು ಹಾಗೂ ಕರೆದರೂ ಪ್ರತಿಕ್ರಿಯಿಸದಿರುವುದರಿಂದ ಬಾಗಿಲು ಒಡೆದು ನೋಡಿದಾಗ ಫ್ಯಾನಿಗೆ ನೇಣು ಬಿಗಿ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಫಾತಿಮತ್ ಅಲ್ಫೀನಾ ವಿವಾಹ ಪಳ್ಳತ್ತಡ್ಕದ ಯುವಕನೊಂದಿಗೆ ನಿಗದಿಯಾಗಿದ್ದು, ಡಿಸೆಂಬರ್‌ನಲ್ಲಿ ಮದುವೆ ನಡೆಯುವುದಿತ್ತು. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net