

ಮುನವಳ್ಳಿ: ಸಮೀಪದ ತೆಗ್ಗಿಹಾಳ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಮತ್ತಿಕೊಪ್ಪದ ಐಸಿಎಆರ್ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಹಾಗೂ ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆ ಸಹಯೋಗದಲ್ಲಿ ಸೋಮವಾರ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಡಿ ಕಬ್ಬು ಬೆಳೆಯಲ್ಲಿ ಗೊಣ್ಣೆ ಹುಳುವಿನ ಸಮಗ್ರ ನಿರ್ವಹಣೆ ಮತ್ತು ಕೃಷಿ ಪದ್ಧತಿ ಕುರಿತು ತಿಳುವಳಿಕೆ ಕಾರ್ಯಕ್ರಮ ಜರುಗಿತು.
ಮತ್ತಿಕೊಪ್ಪ ಕೃಷಿ ಸಂಶೋಧನ ಕೇಂದ್ರದ ಮುಖ್ಯಸ್ಥ ಮಂಜುನಾಥ ಚೌರಡ್ಡಿ ಮಾತನಾಡಿ, ಕಬ್ಬಿನ ಬೆಳೆಗೆ ಅಂಟುವ ರೋಗಗಳು ಮತ್ತು ಗೊಣ್ಣೆ ಹುಳ ನಿಯಂತ್ರಣ ಬಗ್ಗೆ ಸಲಹೆ ನೀಡಿದರು. ಹಿರಿಯ ಕೃಷಿ ವಿಜ್ಞಾನಿಗಳಾದ ಡಾ.ಭಗತ, ಎಸ್.ಎಸ್.ಹಿರೇಮಠ, ರೇಣುಕಾ ಸಕ್ಕರೆ ಕಾರ್ಖಾನೆ ಕಬ್ಬು ವಿಭಾಗದ ಮುಖ್ಯಸ್ಥ ಮಹಾವೀರ ಮಲಗೌಡನವರ, ಸಹಾಯಕ ಕೃಷಿ ಅಧಿಕಾರಿ ಎಸ್.ಎಲ್.ದೇಸಾಯಿ, ಸಾವಯವ ಕೃಷಿಕ ಜಗದೀಶ ಹಿರೇಮಠ ಕಬ್ಬಿನ ಇಳುವರಿ, ಬೀಜೋಪಚಾರ ಹಾಗೂ ಸಾವಯವ ಗೊಬ್ಬರ ಬಳಕೆ ಕುರಿತು ಮಾಹಿತಿ ನೀಡಿದರು.
ಗ್ರಾಪಂ ಅಧ್ಯ ಹನುಮಂತ ಸಿಂಗನ್ನವರ, ಸದಸ್ಯ ಅಶೋಕ ಕಂಕಣವಾಡಿ, ಸುಧೀರ ಕರಿಕಟ್ಟಿ, ಯಲ್ಲಪ್ಪ ಗೋಕಾಕ. ನೀಲಕಂಠ ಕವಳಿಕಾಯಿ, ಶಂಕರಗೌಡ ಹಿರಲಿಂಗನ್ನವರ, ರವೀಂದ್ರ ಚಟ್ನಿಸ್, ಕೆ.ಎಂ.ಪಾಟೀಲ, ರಂಗನಾಥ ಬಟಕುರ್ಕಿ, ಸಂತೋಷ ಪಾಶ್ಚಾಪುರ, ಕಿರಣ ಯಲಿಗಾರ, ಕಲ್ಲಪ್ಪ ಕಾಂಬಳೆ, ಮಂಜು ನರಗುಂದ, ರಮೇಶ ಅಂಚಿ, ರಾವೇಂದ್ರ ಅಂಚಿ, ಟಿ.ಎಸ್ ಜೈನ ಇತರರಿದ್ದರು.