

ಗಂಗೊಳ್ಳಿ: ಮುಳ್ಳಿಕಟ್ಟೆ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ಲಾರಿ ಮಗುಚಿದೆ. ಕೊಲ್ಲಾಪುರದಿಂದ ಸಕ್ಕರೆ ತುಂಬಿಸಿಕೊಂಡು ಕೇರಳಕ್ಕೆ ಸಾಗುತ್ತಿದ್ದ 14 ಚಕ್ರದ ಲಾರಿ ಮುಳ್ಳಿಕಟ್ಟೆ ಸರ್ಕಲ್‌ನಲ್ಲಿ ಎದುರುಗಡೆಯಿಂದ ವಾಹನವನ್ನು ತಪ್ಪಿಸುವ ಭರದಲ್ಲಿ ಬ್ರೇಕ್ ಹಾಕಿದ ಪರಿಣಾಮ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮುಗುಚಿದೆ. ಲಾರಿ ಚಾಲಕ ಹಾಗೂ ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.