ಶುಗರ್, ಬಿಪಿ ನಿಯಂತ್ರಣಕ್ಕೆ ರಕ್ತದಾನ ಮದ್ದು

chn sep 09 rakthadana shibira
Published on

ಚನ್ನಗಿರಿ: ದಾನದಲ್ಲಿ ರಕ್ತದಾನ ವೇ ಶ್ರೇಷ್ಠ. ದಾನಿಗಳು ಮುಂದೆ ಬಂದು ರಕ್ತ ನೀಡಿದರೆ ಒಬ್ಬರ ಜೀವ ಉಳಿಸಿದ ಪುಣ್ಯ ಸಿಗಲಿದೆ ಎಂದು ಲಯನ್ಸ್ ಕ್ಲಬ್ ಚನ್ನಗಿರಿ ಚನ್ನಮ್ಮಾಜಿ ಅಧ್ಯಕ್ಷ ಮಾವಿನಹೊಳೆ ಪ್ರಕಾಶ್ ತಿಳಿಸಿದರು.

ಇಲ್ಲಿನ ರಾಮ ಮನೋಹರ ಲೋಹಿಯಾ ಭವನದಲ್ಲಿ ಲಯನ್ಸ್ ರಕ್ತನಿಧಿ ಕೇಂದ್ರ, ಎಚ್‌ಡಿಎಫ್‌ಸಿ ಬ್ಯಾಂಕ್, ಲಯನ್ಸ್ ಕ್ಲಬ್ ಚನ್ನಗಿರಿ ಚನ್ನಮ್ಮಾಜಿ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಶನಿವಾರ ಮಾತನಾಡಿದರು.

ಅಪಘಾತ ಹಾಗೂ ಜೀವ ಹೋಗುವಂತಹ ಸಮಯದಲ್ಲಿ ತುರ್ತಾಗಿ ರಕ್ತ ಸಿಗದ ಕಾರಣ ಜನರು ಸಾವಿಗೆ ಶರಣಾಗುತ್ತಿದ್ದಾರೆ.

ಜನರು ದಾನ ಮಾಡುವಂತಹ ರಕ್ತವನ್ನು ಬೇರೆಯವರಿಗೆ ನೀಡುವ ಮೂಲಕ ಜೀವ ಉಳಿಸಬೇಕಾಗುತ್ತದೆ.

ಆರೋಗ್ಯವಂತರಾಗಿ ಇರುವಂತಹ ಹದಿನೆಂಟು ವರ್ಷ ಮೇಲ್ಪಟ್ಟವರು ಯಾರು ಬೇಕಾದರೂ ರಕ್ತದಾನ ಮಾಡಬಹುದಾಗಿದೆ.

ಇದರಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಅನೇಕ ರೋಗ ತಡೆಯಬಹುದು.

ರಕ್ತದಾನದಿಂದ ದೇಹದಲ್ಲಿ ಹೊಸರಕ್ತ ಬೆಳೆಯುವುದರಿಂದ ಆರೋಗ್ಯದ ಸಮಸ್ಯೆ ಇರುವುದಿಲ್ಲ ಎಂದರು.

ಈ ಸಂದರ್ಭದಲ್ಲಿ 52 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಲಯನ್ಸ್ ಕ್ಲಬ್‌ನ ಜಿ.ಎಂ. ನರೇಂದ್ರ, ರವಿಕುಮಾರ್, ಸಿ.ಎನ್. ಮುಖೇಶ್, ಅಶೋಕ್, ದೀಪಕ್‌ಕುಮಾರ್, ಜ್ಯೋತಿ ಪ್ರಸಾದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net