

ಗೋಕರ್ಣ:ಖ್ಯಾತ ಇನ್ಫೋಸಿಸ್ ಪ್ರತಿಷ್ಠಾನ ಅಧ್ಯಕ್ಷೆ ಸುಧಾ ನಾರಾಯಣ ಮೂರ್ತಿ ಅವರು ಸೋಮವಾರ ಇಲ್ಲಿನ ವಿವಿಧ ಪುರಾಣ ಪ್ರಸಿದ್ಧ ಮಂದಿರಗಳಲ್ಲಿ ಪೂಜೆ ಕೈಗೊಂಡರು.ಶ್ರೀಮಹಾಗಣಪತಿ ಮಂದಿರದಲ್ಲಿ ಪ್ರಥಮ ಪೂಜೆ ಸಲ್ಲಿಸಿದ ಅವರು ನಂತರ ಶ್ರೀಮಹಾಬಲೇಶ್ವರ ಮಂದಿರಕ್ಕೆ ಭೇಟಿಯಿತ್ತು ಆತ್ಮಲಿಂಗಕ್ಕೆ ಅರ್ಚಿಸಿದರು.ಮಂದಿರ ಸಮಿತಿಯ ವೇ.ಮಹಾಬಲ ಉಪಾಧ್ಯ,ಮುಖ್ಯ ಅರ್ಚಕ ವೇ.ಶ್ರೀನಾಗ ಅಡಿಮುಳೆ ಮುಂತಾದವರು ನಿರ್ವಹಿಸಿದರು.