ಕಾರವಾರ:ಬರಗಾಲವಿರಲಿ, ಚುನಾವಣೆ ಇರಲಿ, ಯಾವುದೇ ರೀತಿಯ ಕೆಲಸಗಳ ಒತ್ತಡಗಳಿದ್ದರೂ ಜಿಲ್ಲೆಯ ಸಾರ್ವಜನಿಕರಿಗೆ
ತೊಂದರೆಯಾಗದಂತೆ, ನಿಗಧಿಪಡಿಸಿರುವ ಅವಧಿಗೂ ಮೊದಲೇ ಅತ್ಯಂತ ತ್ವರಿತಗತಿಯಲ್ಲಿ ಸರ್ಕಾರಿ ಸೇವೆಗಳನ್ನು ಒದಗಿಸುವಲ್ಲಿ
ಉತ್ತರಕನ್ನಡ ಜಿಲ್ಲೆಯು ರಾಜ್ಯದಲ್ಲೇ ನಂ.1 ಸ್ಥಾನ ಪಡೆದಿದೆ.
ಏಪ್ರಿಲ್ 2024 ರಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಒತ್ತಡದ ಕೆಲಸಗಳ ನಡುವೆಯೂ ಜಿಲ್ಲೆಯ
ಸಾರ್ವಜನಿಕರಿಂದ ಸಕಾಲ ಸೇವೆಯಡಿ, ಸರ್ಕಾರದ ವಿವಿಧ ಸೇವೆಗಳನ್ನು ಒದಗಿಸಲು 40,996 ಅರ್ಜಿಗಳನ್ನು ಸ್ವೀಕರಿಸಿದ್ದು, ಈ
ಅರ್ಜಿಗಳಲ್ಲಿ 40,479 ಅರ್ಜಿಗಳನ್ನು ವಿಲೇವಾರಿ ಮಾಡಿದ್ದು, ವಿಲೇವಾರಿ ಮಾಡಿರುವ ಅರ್ಜಿಗಳಲ್ಲಿ 39,696 ಅರ್ಜಿಗಳನ್ನು
ನಿಗಧಿಪಡಿಸಿದ ಅವಧಿಗೂ ಮೊದಲೇ ವಿಲೇವಾರಿ ಮಾಡುವ ಮೂಲಕ ಶೇ.98.07 ಪ್ರಗತಿ ಸಾಧಿಸಿ ರಾಜ್ಯದಲ್ಲೇ ಪ್ರಥಮ ಸ್ಥಾನ
ಪಡೆದಿದೆ.
ಸರ್ಕಾರದ ವಿವಿಧ ಸೇವೆಗಳನ್ನು ಕೋರಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳಿಗೆ ಸಂಬAಧಿಸಿದAತೆ, ನಿಗಧಿತ ದಿನಗಳ ಒಳಗೇ
ಸೇವೆಯನ್ನು ಒದಗಿಸಿ, ಅರ್ಜಿಯನ್ನು ವಿಲೇವಾರಿ ಮಾಡಬೇಕು ಎನ್ನುವ ನಿರ್ದಿಷ್ಟ ಅವಧಿಯನ್ನು ಸಕಾಲ ಯೋಜನೆಯಲ್ಲಿ
ನಿಗಧಿಗೊಳಿಸಲಾಗಿದೆ. ಈ ನಿಗಧಿತ ಅವಧಿಗೂ ಮುಂಚಿತವಾಗಿಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರ್ಜಿಗಳ ವಿಲೇವಾರಿ
ನಡೆಯುತ್ತಿದ್ದು, ಬರಗಾಲ ಮತ್ತು ಚುನಾವಣೆಯ ಸಂದರ್ಭದಲ್ಲೂ ನಾಗರೀಕ ಸೇವೆಯಲ್ಲಿ ಯಾವುದೇ ವ್ಯತ್ಯಯ ಆಗದಂತೆ
ಜಿಲ್ಲಾಡಳಿತ ಕಾರ್ಯನಿರ್ವಹಿಸಿದ್ದು ಗಮನಾರ್ಹವಾಗಿದೆ.
ಜಿಲ್ಲೆಯ ಸಾರ್ವಜನಿಕರಿಗೆ ಸರ್ಕಾರದ ಸೇವೆಗಳು ನಿಗಧಿತ ಅವಧಿಗೆ ದೊರೆಯಬೇಕು ಎನ್ನುವ ಉದ್ದೇಶದಿಂದ, ನಾಗರೀಕರು
ವಿವಿಧ ಸೌಲಭ್ಯ ಕೋರಿ ಸಲ್ಲಿಸುವ ಮನವಿಯ ಅರ್ಜಿಗಳನ್ನು ಸಕಾಲ ತಂತ್ರಾಂಶದ ಮೂಲಕವೇ ಸ್ವೀಕರಿಸುವಂತೆ ಎಲ್ಲಾ
ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ತಂತ್ರಾಂಶದಲ್ಲಿ ಅಳವಡಿಕೆಯಾದ ಅರ್ಜಿಗಳ ಸ್ಥಿತಿಗತಿ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ
ದೊರೆಯಲಿದೆ. ಅಲ್ಲದೇ ನಿರ್ದಿಷ್ಟ ಅವಧಿಯೊಳಗೆ ಅರ್ಜಿಗಳನ್ನು ವಿಲೇವಾರಿ ಮಾಡುವ ಗುರಿ ಇರುವುದರಿಂದ, ನಿಯಮಿತವಾಗಿ
ಸಭೆಗಳನ್ನು ನಡೆಸಿ, ಬಾಕಿ ಅರ್ಜಿಗಳ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡುತ್ತಿರುವುದರಿಂದ, ನಿರ್ದಿಷ್ಟ ಪಡಿಸಿರುವ
ಅವಧಿಯ ಒಳಗೇ ಸರ್ಕಾರಿ ಸೇವೆಗಳನ್ನು ಜಿಲ್ಲೆಯ ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆ. ಲೋಕಸಭಾ ಚುನಾವಣಾ ಕಾರ್ಯಗಳ
ಒತ್ತಡವಿದ್ದರೂ ಸಹ ಸಾರ್ವಜನಿಕ ಸೇವೆಗಳಿಗೆ ಯಾವುದೇ ವ್ಯತ್ಯಯಗಳಾಗದಂತೆ ವಿಶೇಷ ಒತ್ತು ನೀಡಿ, ಅರ್ಜಿಗಳನ್ನು ವಿಲೇವಾರಿ
ಮಾಡಲಾಗಿದೆ.ಗಂಗೂಬಾಯಿ ಮಾನಕರ,ಜಿಲ್ಲಾಧಿಕಾರಿಗಳು ಉತ್ತರ ಕನ್ನಡ ಜಿಲ್ಲೆ.