ದೈವ ದೇವರ ಆಶೀರ್ವಾದದಿಂದ ಸಫಲತೆ

anveshanam
ಎಸ್‌ಆರ್ ಪದವಿಪೂರ್ವ ಕಾಲೇಜಿನಲ್ಲಿ ಅನ್ವೇಷಣಂ- 2024 ಕಾರ್ಯಕ್ರಮ ಸಹ ನಟ ಸತೀಶ್ ಆಚಾರ್ಯ ಪೆರ್ಡೂರು ಉದ್ಘಾಟಿಸಿದರು.
Published on

ಹೆಬ್ರಿ: ತಂದೆ ತಾಯಿ, ಗುರುಗಳು ಮತ್ತು ನಂಬಿದ ದೈವ ದೇವರುಗಳ ಆಶೀರ್ವಾದದಿಂದ ನಾವು ಸಫಲತೆ ಪಡೆಯಬಹುದು ನಟ ಸತೀಶ್ ಆಚಾರ್ಯ ಪೆರ್ಡೂರು ಹೇಳಿದರು.

ಎಸ್‌ಆರ್ ಪದವಿ ಪೂರ್ವ ಕಾಲೇಜಿನಲ್ಲಿ ಅನ್ವೇಷಣಂ-2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತೆ ರಾಧಾ ಹಿರೇಗೌಡರ್ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಸಾಧಿಸುವ ಮನಸ್ಸು ಮತ್ತು ಛಲವಿದ್ದರೆ ಯಾವುದೇ ಕಠಿಣ ಪರಿಸ್ಥಿತಿ ಎದುರಿಸಿ ಜೀವನ ನಿರೂಪಿಸಬಹುದು ಎಂದರು.

ಸಂಸ್ಥೆ ಅಧ್ಯಕ್ಷ ಎಚ್.ನಾಗರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರಶಾಂತ್ ಎಚ್., ರಕ್ಷಿತಾ ಭಟ್ ಇದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ಜಗದೀಶ್ ನಿರೂಪಿಸಿದರು. ಹಿಂದಿ ಉಪನ್ಯಾಸಕಿ ವನಿತಾ ತೋಳಾರ್ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಅಮೃತ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net