ಆತ್ಮವಿಶ್ವಾಸ ಮಹತ್ವಾಕಾಂಕ್ಷೆಯಿಂದ ಯಶಸ್ಸು

nitte
Published on

ಕಾರ್ಕಳ: ಮಹಿಳಾ ದಿನಾಚರಣೆ ಸ್ತ್ರೀಯರನ್ನು ಪೋಷಿಸುವ, ಆಧರಿಸುವ ಪುರುಷ ಸಮಾಜವನ್ನೂ ಶ್ಲಾಘಿಸುವ ದಿನವೆಂಬುದನ್ನು ನೆನಪಿಟ್ಟುಕೊಳ್ಳಬೇಕು. ಪುರುಷರಷ್ಟೇ ಮಹಿಳೆಯೂ ಸಮಾನಳು. ತಮ್ಮ ಗುರಿ ಬೆನ್ನಟ್ಟುವಲ್ಲಿ ಆತ್ಮವಿಶ್ವಾಸ, ಮಹತ್ವಾಕಾಂಕ್ಷೆ, ನಿರ್ಭೀತಿಯಿಂದ ಮುಂದುವರಿದಾಗ ಯಶಸ್ಸು ಸಾಧ್ಯ ಎಂದು ಕಾರ್ಕಳ ಪೊಲೀಸ್ ಉಪವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ.ಹರ್ಷ ಪ್ರಿಯಂವದ ಹೇಳಿದರು.

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಆಫ್-ಕ್ಯಾಂಪಸ್ ಸೆಂಟರ್ ಕ್ಯಾಂಪಸ್ ನಿರ್ವಹಣೆ ಮತ್ತು ಅಭಿವೃದ್ಧಿ ವಿಭಾಗ ನಿರ್ದೇಶಕ ಪ್ರೊ.ಎ.ಯೋಗೀಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ವಿಶ್ವವಿದ್ಯಾಲಯ ಕ್ಯಾಂಪಸ್ ಸೆಂಟರ್ ಉಪ ಕುಲಸಚಿವೆ ಡಾ.ರೇಖಾ ಭಂಡಾರ್ಕರ್, ಕ್ಯಾಂಪಸ್ ನಿರ್ವಹಣೆ ಮತ್ತು ಅಭಿವೃದ್ಧಿ ವಿಭಾಗ ನಿರ್ದೇಶಕ ಪ್ರೊ.ಎ.ಯೋಗೀಶ್ ಹೆಗ್ಡೆ, ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲೂಣ್ಕರ್ ಉಪಸ್ಥಿತರಿದ್ದರು.

ಮಹಿಳಾ ವಸತಿ ನಿಲಯ ಮುಖ್ಯ ವಾರ್ಡನ್ ಹಾಗೂ ಇಲೆಕ್ಟ್ರಾನಿಕ್ಸ್ ವಿಭಾಗ ಪ್ರೊ.ಡಾ.ವೀಣಾ ದೇವಿ ಶಾಸ್ತ್ರಿಮಠ್ ಸ್ವಾಗತಿಸಿ, ಅಡ್ಮಿನ್ ವಿಭಾಗ ಮುಖ್ಯಸ್ಥೆ ಸ್ಮಿತಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಇಲೆಕ್ಟ್ರಾನಿಕ್ಸ್ ಮತ್ತು ಕಮುನಿಕೇಷನ್ ಇಂಜಿನಿಯರಿಂಗ್ ವಿಭಾಗ ಸಹ ಪ್ರಾಧ್ಯಾಪಕಿ ಡಾ.ಪದ್ಮಾವತಿ, ಡಾ.ಶ್ರೀವಿದ್ಯಾ ಪ್ರಾರ್ಥಿಸಿದರು. ಹಣಕಾಸಿನ ವಿಭಾಗ ಮುಖ್ಯಸ್ಥೆ ಶೈಲಜಾ ಶೆಟ್ಟಿ ವಂದಿಸಿದರು. ಮಾನವಿಕ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ವೇತಾ ಭರತ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net