

ಹೆಬ್ರಿ: ಸ್ಪರ್ಧಾತ್ಮಕ ಯುಗದಲ್ಲಿ ನಿರಂತರ ಅಧ್ಯಯನದಲ್ಲಿ ತೊಡಗಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ಪ್ರತಿನಿತ್ಯ ದಿನಪತ್ರಿಕೆ ಓದುವುದರಿಂದ ಜಗತ್ತಿನ ಆಗು-ಹೋಗುಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ ಎಂದು ತುಮಕೂರು ವಿ.ವಿ. ಕಲಾ ಕಾಲೇಜಿನ ಪ್ರಾಂಶುಪಾಲೆ ಡಾ.ದಾಕ್ಷಾಯಿಣಿ ತಿಳಿಸಿದರು.
ವಿ.ವಿ. ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ಮತ್ತು ಶಾಂತಿನಿಕೇತನ ಯುವ ವೃಂದದ ಜಂಟಿ ಆಶ್ರಯದಲ್ಲಿ ನಡೆದ ಶಾಂತಿನಿಕೇತನ ಜ್ಞಾನಸ್ಫೂರ್ತಿ ರಸಪ್ರಶ್ನೆ ಕಾರ್ಯಕ್ರಮದ ಬಹುವಾನ ವಿತರಿಸಿ ಮಾತನಾಡಿದರು.
ಶಾಂತಿನಿಕೇತನ ಸಂಸ್ಥಾಪಕ ಕ್ವಿಜ್ ವಾಸ್ಟರ್ ರಾಜೇಶ್ ಮಾತನಾಡಿ, ಸರ್ಕಾರಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಅರಿವನ್ನು ಮೂಡಿಸಲು ಶಾಂತಿನಿಕೇತನ ಯುವ ಜ್ಞಾನಸ್ಫೂರ್ತಿ ರಸಪ್ರಶ್ನೆ ಕಾರ್ಯಕ್ರಮ ನಡೆಸುತ್ತಿದೆ ಎಂದರು.
ವಿಭಾಗ ಮುಖ್ಯಸ್ಥ ಡಾ.ಶ್ರೀನಿವಾಸ್ ಎಂ.ಡಿ. ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಸ್ಪರ್ಧೆಯಲ್ಲಿ ಕಲಾ ಕಾಲೇಜಿನ ಇತಿಹಾಸ ಮತ್ತು ಪತ್ರಿಕೊಧ್ಯಮ ವಿಭಾಗದ ಸಂಜಯ್ ಕುವಾರ್, ಶಿವಪ್ಪ, ಛತ್ರಪತಿ, ರಶ್ಮಿ ಮೊದಲ ಸ್ಥಾನ ಪಡೆದುಕೊಂಡರು. ರಾಜ್ಯಶಾಸ ಮತ್ತು ಐಚ್ಛಿಕ ಆಂಗ್ಲ ವಿಭಾಗದ ಅನಿಷಾ ಜಿ., ರಾಕೇಶ್ ಸಿ., ಪವನ್‌ಕುವಾರ್, ಪ್ರದೀಪ್ ಎಸ್. ದ್ವೀತಿಯ ಸ್ಥಾನ ಪಡೆದುಕೊಂಡರು. ವಿಭಾಗದ ಅರುಣ್ ಕುವಾರ್ ಕೆ., ಮಂಜುಳಾದೇವಿ, ಡಾ.ಆಶಾರಾಣಿ ಉಪಸ್ಥಿತರಿದ್ದರು.