

ಬೆಂಗಳೂರು: ಕಠಿಣ ಪರಿಶ್ರಮ, ಒಳ್ಳೆಯ ಹವ್ಯಾಸ, ತಂತ್ರಜ್ಞಾನ ಬಳಕೆ ಮತ್ತು ಅತ್ಯುತ್ತಮ ಗುರುಗಳಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವೆಂದು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಜವಾಹರ್ ದೊರೆಸ್ವಾಮಿ ಅಭಿಪ್ರಾಯಪಟ್ಟರು.
ಪಿಇಎಸ್ ಶಿಕ್ಷಣ ಸಂಸ್ಥೆ, ಪಿಇಎಸ್ ವಿವಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಡಿಪ್ಲೊಮಾ ತರಗತಿಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ತರಗತಿಯೊಳಗೆ ಕಳೆಯುವ ಸಮಯವನ್ನು ಹೊರಗೆ ಕಳೆಯುವ ಸಮಯದಲ್ಲಿ ಕೂಡ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ವಿದ್ಯಾರ್ಥಿಗಳು ತಮ್ಮ ಗುರಿ ಮುಟ್ಟಬಹುದು ಎಂದರು.
ಪಿಇಎಸ್ ವಿವಿ ಕುಲಪತಿ ಡಾ.ಜೆ.ಸೂರ್ಯಪ್ರಸಾದ್, 2025ರ ಡಿಪ್ಲೋಮಾ ಸಿಇಟಿ (ಡಿಸಿಇಟಿ) ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪ್ರಶಂಸಿದರು. 2023-24, 2024-25ರ ಪ್ರಥಮ,ದ್ವಿತೀಯ ಮತ್ತು ತೃತೀಯ ವರ್ಷದ ತಾಂತ್ರಿಕ ಶಿಕ್ಷಣ ಇಲಾಖೆ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ 64 ವಿದ್ಯಾರ್ಥಿಗಳಿಗೆ ಪ್ರೊ. ಎಂ. ಆರ್. ದೊರೆಸ್ವಾಮಿ ಪ್ರತಿಭಾ ವಿದ್ಯಾರ್ಥಿ ವೇತನ ನೀಡಲಾಯಿತು.
ಹನುಮಂತನಗರ ಪಿಇಎಸ್ ನಿರ್ದೇಶಕ ಪ್ರೊ.ಎಂ.ವಿ.ಸತ್ಯನಾರಾಯಣ, ಪ್ರಾಂಶುಪಾಲ ಪ್ರೊ.ಎಚ್.ಎನ್.ದೇವರಾಜು ಸೇರಿ 500 ವಿದ್ಯಾರ್ಥಿಗಳು ಮತ್ತಿತರರಿದ್ದರು.