ಸೋಲಿನಿಂದ ಕಲಿತ ಪಾಠದಿಂದ ಸಾಧನೆ ಸಾಧ್ಯ

GAN (1)
Published on

ಕುಂದಾಪುರ: ಕ್ರೀಡೆ ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗ. ಸ್ಪರ್ಧೆಗಳು ಆರೋಗ್ಯಕರವಾಗಿರಬೇಕು. ಸೋಲು-ಗೆಲುವು ಎರಡನ್ನೂ ಸವಾನವಾಗಿ ಸ್ವೀಕರಿಸುವ ಕ್ರೀಡಾಸ್ಫೂರ್ತಿ ಬೆಳೆಸಿಕೊಳ್ಳಬೇಕು. ಸೋಲಿನಿಂದ ಕಲಿತ ಪಾಠ ಸಾಧನೆಗೆ ಮೆಟ್ಟಿಲಾಗುತ್ತದೆ. ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗಲೇ ಸಾಧನೆ ವಾಡಲು ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಜಿಲ್ಲಾ ಉಪನಿರ್ದೇಶಕ ಲೋಕೇಶ ಸಿ. ಹೇಳಿದರು.

ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಸಿಐಎಸ್‌ಸಿಇ ಗೇಮ್ಸ್ ಮತ್ತು ಸ್ಫೋಟ್ಸ್ 2025ರ ಅಂಗವಾಗಿ ಮಂಗಳವಾರ ಆಯೋಜಿಸಲಾಗಿದ್ದ ಪ್ರಾದೇಶಿಕ ಮಟ್ಟದ ಕೇರಂ ಟೂರ್ನಮೆಂಟ್ ಸ್ಪರ್ಧೆ ಉದ್ಘಾಟಿಸಿ ವಾತನಾಡಿದರು.

ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಪಟು ದೀಕ್ಷಿತಾ ಆರ್.ಗೌಡ ಮಾತನಾಡಿ, ಯಾವುದೇ ಕ್ಷೇತ್ರದಲ್ಲಾಗಲೀ ಕಷ್ಟಪಡದೆ ಸಾಧನೆ ಅಸಾಧ್ಯ. ಕ್ರೀಡೆಯು ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ. ಕ್ರೀಡಾಪಟುಗಳಿಂದ ದೇಶದ ಕೀರ್ತಿಯೂ ಹೆಚ್ಚುತ್ತದೆ ಎಂದರು.

ಸಿದ್ಧಿವಿನಾಯಕ ವಸತಿ ಶಾಲಾ ಪ್ರಾಂಶುಪಾಲ ಶರಣಕುವಾರ ವಾತನಾಡಿದರು. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಉಪಾಧ್ಯಕ್ಷ ಎಚ್.ಬಾಲಚಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಂ., ಶಾಲಾ ಉಪಪ್ರಾಂಶುಪಾಲ ರಾಮ ದೇವಾಡಿಗ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಸನ್ನಿಧಿ ಅಡಿಗ ಸ್ವಾಗತಿಸಿದರು. ಸ್ಕಂದ ಉಡುಪ ವಂದಿಸಿದರು. ಅದಿತಿ ಬಿ.ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net