

ವಿಜಯವಾಣಿ ಸುದ್ದಿಜಾಲ ಬೈಂದೂರು
ಉದ್ಯೋಗದಲ್ಲಿ ಇಚ್ಛಾಶಕ್ತಿ ಹಾಗೂ ಪ್ರಾಮಾಣಿಕತೆ ಪ್ರಮುಖ ಅಂಶಗಳಾಗಿದ್ದು, ಶಿಸ್ತು, ಸಮಯಪ್ರಜ್ಞೆ ಅಳವಡಿಸಿಕೊಂಡರೆ ಯಶಸ್ವಿ ವ್ಯಕ್ತಿಯಾಗುವುದರ ಜತೆಗೆ ಸಮಾಜಕ್ಕೂ ಮಾದರಿಯಾಗಬಹುದು. ನಮ್ಮ ಉದ್ಯೋಗವನ್ನು ನಾವು ಗೌರವಿಸಿದರೆ ಸಮಾಜ ನಮ್ಮನ್ನು ಗೌರವಿಸುತ್ತದೆ ಎಂದು ಹಿರಿಯ ರಂಗಕಲಾವಿದ ಕಂಚಿಕಾನ್ ರವೀಂದ್ರ ಕಿಣಿ ಹೇಳಿದರು.
ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಮಂಗಳವಾರ ನಡೆದ ಬೈಂದೂರು ವಲಯದ ಧ್ವನಿ-ಬೆಳಕು ಸಂಯೋಜಕರ ಸಂಘಟನೆಯ 14ನೇ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಡಿದರು.
ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿದರು. ಬೈಂದೂರು ವಲಯದ ಅಧ್ಯಕ್ಷ ಗಣೇಶ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷ ಧರ್ಮರಾಜ್ ಕುಂದರ್, ಪ್ರಮುಖರಾದ ಭರತ್ಕುಮಾರ್ ಕುಂದಾಪುರ, ಗಣೇಶ್ ಎಂ.ಕೆ., ರಾಘವೇಂದ್ರ ಪ್ರಭು ಕೋಟ, ಸತೀಶ್ ಮುಳ್ಳುಗುಡ್ಡೆ, ಚಂದ್ರಶೇಖರ ಪೂಜಾರಿ, ಸಂತೋಷ್ ಶೆಟ್ಟಿಗಾರ್, ಸುಧಾಕರ ಸುವರ್ಣ, ನವೀನ್ ಲೋಬೋ ಇದ್ದರು.
ಬೈಂದೂರು ವಲಯ ಗೌರವಾಧ್ಯಕ್ಷ ಶಶಿಧರ ಶೆಣೈ ಸ್ವಾಗತಿಸಿದರು. ರಾಜ್ಯ ಪ್ರತಿನಿಧಿ ಎಚ್.ಉದಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರಭಾಕರ ದೇವಾಡಿಗ ವರದಿ ವಾಚಿಸಿದರು. ನಿಕಟಪೂರ್ವ ಕಾರ್ಯದರ್ಶಿ ಯು.ವಿನಾಯಕ ಪ್ರಭು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸದಸ್ಯ ಶೇಷು ದೇವಾಡಿಗ ವಂದಿಸಿದರು.
ಸದಸ್ಯರ ಸಂಖ್ಯೆ ಹೆಚ್ಚಾದಂತೆ ಸಂಘಟನೆಯ ಬಲವೂ ವೃದ್ಧಿಸುತ್ತದೆ. ಧ್ವನಿ ಮತ್ತು ಬೆಳಕು ಸಂಘಟನೆ ಇಲ್ಲದೆ ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗಲಾರದು. ಈ ನಿಟ್ಟಿನಲ್ಲಿ ಸಂಘಟನೆಯ ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. - ಗುರುರಾಜ ಗಂಟಿಹೊಳೆ, ಶಾಸಕ