ಆಪರೇಷನ್​ ಸಿಂಧೂರ ಯಶಸ್ವಿಗೆ ಮುಸ್ಲಿಂರ ಸಾಮೂಹಿಕ ಪ್ರಾರ್ಥನೆ

Hinudu_Muslim_Pooje_02
Published on

ತುಮಕೂರು: ಆಪರೇಷನ್​ ಸಿಂಧೂರ ಯಶಸ್ವಿ ಹಾಗೂ ಭಾರತೀಯ ಸೇನೆ ವಿಜಯ ಸಾಧಿಸಲಿ, ಮತ್ತು ಶಕ್ತಿಯನ್ನು ಕರುಣಿಸುವಂತೆ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಲ್ಲಿ ಹಾಗೂ ಮಸೀದಿಗಳಲ್ಲಿ ವಿಶೇಷ ಪೂಜೆ ಹಾಗೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ದೇವಸ್ಥಾನಗಳಲ್ಲಿ ಸರ್ಕಾರದ ಆದೇಶದಂತೆ ಭಾರತೀಯ ಸೇನೆ ಹೆಸರಲ್ಲಿ, ಯೋಧರಿಗೆ ಒಳಿತಾಗಲಿ ಹಾಗೂ ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿಯನ್ನು ಭಗವಂತನು ಕರುಣಿಸುವಂತೆ ವಿಶೇಷ ಸಂಕಲ್ಪದೊಂದಿಗೆ ಗುರುವಾರ ಪೂಜೆ ಕೈಗೊಳ್ಳಲಾಯಿತು. ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ, ರಜತಾದ್ರಿಪುರದ ಶ್ರೀ ಲಕ್ಷಿ$್ಮ ನರಸಿಂಹಸ್ವಾಮಿ ದೇವಾಲಯ, ಕಗ್ಗೆರೆ ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನ, ಹೆತ್ತೇನಹಳ್ಳಿ ಮಾರಮ್ಮ, ವೈ.ಎನ್​.ಹೊಸಕೋಟೆ ಶ್ರೀ ಕೋಟೇಶ್ವರ ದೇವಸ್ಥಾನ, ನಾಗಲಮಡಿಕೆ ಶ್ರೀ ಸುಬ್ರಮಣ್ಯ ಸ್ವಾಮಿ ಸೇರಿದಂತೆ ಮುಜರಾಯಿ ದೇವಾಲಯಗಳಲ್ಲಿ ಭಾರತೀಯ ಯೋಧರ ಒಳಿತಿಗಾಗಿ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.

ಸಾಮೂಹಿಕ ಪ್ರಾರ್ಥನೆ: ಪಹಲ್ಗಾಮ್​ನಲ್ಲಿ ಉಗ್ರರ ದಾಳಿಗೆ ಬಲಿಯಾದ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರಿ, ಹಾಗೆಯೇ ಉಗ್ರರ ವಿರುದ್ಧ ದಾಳಿ ಕೈಗೊಂಡಿರುವ ಭಾರತೀಯ ಸೇನೆ ವಿಜಯ ಸಾಧಿಸುವಂತೆ ಮುಸ್ಲಿಂ ಬಾಂಧವರು ನಗರದ ಮೆಕ್ಕಾ ಮಸೀದಿ ಸೇರಿದಂತೆ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಮುತ್ತುವಲ್ಲಿಗಳ ನೇತೃತ್ವದಲ್ಲಿ ಶುಕ್ರವಾರ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ವಕ್ಫ್​ ಮತ್ತು ಅಲ್ಪಸಂಖ್ಯಾತರ ಸಚಿವ ಜಮೀರ್​ ಅಹಮದ್​ ಖಾನ್​ ಕರೆಯ ಮೇರೆಗೆ ರಾಜ್ಯದಲ್ಲಿ ಮಧ್ಯಾಹ್ನದ ಪ್ರಾರ್ಥನೆಯ ವೇಳೆ ದೇಶದ ಸೇನಗೆ ನೈತಿಕ ಬೆಂಬಲ ಕೋರಿ, ಹಾಗೂ ಯುದ್ಧದಲ್ಲಿ ಭಾರತೀಯ ಸೇನೆಗೆ ವಿಜಯ ಲಭಿಸಲಿ ಎಂದು ಕೋರಿದರು.

ಸಾಮೂಹಿಕ ಪ್ರಾರ್ಥನೆಯಲ್ಲಿ ಮೌಲಾನ ಯಾಸೀನ್​ ಸಾಬ್​, ಮಸೀದಿ ಕಾರ್ಯದರ್ಶಿ ಅಬ್ದುಲ್​ ಸುಭಾನ್​, ತಾಜುದ್ದೀನ್​ ಷರಿಫ್​,ಸೈಯದ್​ ಸುಭಾನ್​ ಅಪ್ಸರ್​ ಪಾಷ,ತನ್ವೀರ್​, ಅದೀಬ್​ ಅಹಮದ್​, ಅಪ್ಸರ್​ ಖಾನ್​ ಮುಜಾಹಿದ್​ ಪಾಷ, ಫಾರೂಕ್​ ಅಹಮದ್​ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net