ಉತ್ತಮ ಸೇವೆಯಿದ್ದಲ್ಲಿ ಯಶಸ್ಸು ಪ್ರಾಪ್ತಿ

upahara
ನೂತನ ಉಪಹಾರ ಗೃಹದ ಕಾರ್ಯಾರಂಭ ಸೋಮವಾರ ನಡೆಯಿತು.
Published on

ಶಿರ್ವ: ವಿದ್ಯಾರ್ಥಿಗಳಿಗೆ ಉತ್ತಮ ಸೇವೆ ದೊರೆಯುಂತಾದರೆ ಯಶಸ್ಸು ತನ್ನಿಂದ ತಾನೆ ಪ್ರಾಪ್ತಿಯಾಗುತ್ತದೆ. ಹಳೇ ವಿದ್ಯಾರ್ಥಿ ಸಂಘದ ಸಂಕಲ್ಪ ಹಾಗೂ ಬದ್ಧತೆಯಿಂದ ಒಂದೊಳ್ಳೆಯ ಉಪಹಾರಗೃಹ ಸಾಧ್ಯವಾಗಿದೆ. ಇಲ್ಲಿ ಶುಚಿ ಮತ್ತು ರುಚಿ ಕಾಪಾಡಲು ಮುತುವರ್ಜಿ ವಹಿಸಬೇಕು ಎಂದು ಶಿರ್ವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಾಗೂ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಶಿರ್ವ ಹಿಂದೂ ಪಿಯು ಕಾಲೇಜು ಕ್ಯಾಂಪಸ್‌ನಲ್ಲಿ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ದಾನಿಗಳ ಸಹಯೋಗದೊಂದಿಗೆ ಸಂಸ್ಥೆಗೆ ಕೊಡುಗೆಯಾಗಿ ನೀಡಿರುವ ನೂತನ ಉಪಹಾರ ಗೃಹದ ಕಾರ್ಯಾರಂಭ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ, ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ಸವಲತ್ತುಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಬದ್ಧತೆಯಿಂದ ತೊಡಗಿಸಿಕೊಂಡಿದೆ ಎಂದರು.

ಶಿರ್ವ ವಿದ್ಯಾವರ್ಧಕ ಸಂಘದ ಸಂಚಾಲಕ ವಿ.ಸುಬ್ಬಯ್ಯ ಹೆಗ್ಡೆ, ನಿವೃತ್ತ ಪ್ರಾಂಶುಪಾಲ ಪ್ರೊ.ರಾಜಗೋಪಾಲ್, ಉಪಹಾರ ಗೃಹದ ನಿರ್ವಾಹಕ ರಾಜೇಶ್ ರಾವ್ ಎರ್ಮಾಳ್, ಜ್ಞಾನ ಚೇತನ ಟ್ರಸ್ಟ್‌ನ ಪ್ರತಿನಿಧಿ ಜಯಪ್ರಕಾಶ್ ನೋರ್ಬರ್ಟ್ ಮಚಾದೊ ಅತಿಥಿಗಳಾಗಿದ್ದರು.

ಪ್ರಮುಖರಾದ ಎನ್.ಎನ್.ಹೆಗ್ಡೆ, ನವೀನ್ ಶೆಟ್ಟಿ ಕುತ್ಯಾರು, ವಿರೇಂದ್ರ ಬಿ.ಶೆಟ್ಟಿ, ರಾಜೇಶ್ ಶಬರಿ, ಉಮೇಶ್ ಕಟಿಲೇಶ್ವರಿ, ಪಿಲಿಪ್ಸ್ ಡಿಸೋಜಾ, ಡೇವಿಡ್ ಮಥಾಯಿಸ್ ಹಾಗೂ ಸಂಸ್ಥೆಯ ಸಿಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿಗಾರ್ ಸ್ವಾಗತಿಸಿದರು. ಪ್ರಾಂಶುಪಾಲ ಸುಂದರ್ ಮೇರ ವಂದಿಸಿದರು. ಉಪನ್ಯಾಸಕಿ ನಿಶಿತಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net