ರಾಘವೇಂದ್ರ ಸ್ವಾಮಿಯನ್ನು ನಂಬಿ ಬಂದರೆ ಸಿಗಲಿದೆ ಅನುಗ್ರಹ

mantralaya sri
ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥರ ತುಲಾಭಾರ ಸೇವೆ ಸೋಮವಾರ ನಡೆಯಿತು. ಪ್ರಮುಖರಾದ ಆರ್.ಮೇಲಯ್ಯ ಶೆಟ್ಟಿ, ಎಂ.ಮಲ್ಲಿಕಾರ್ಜುನಗೌಡ ಇತರರಿದ್ದರು
Published on

ಮಾನ್ವಿ: ಗುರು ರಾಘವೇಂದ್ರ ಸ್ವಾಮಿಗಳನ್ನ ಭಕ್ತಿಯಿಂದ ಪೂಜಿಸಿದರೆ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾರೆ ಎಂದು ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.

ಪೋತ್ನಾಳ ಗ್ರಾಮದಲ್ಲಿ ಪುರ ಪ್ರವೇಶ ಹಾಗೂ ಶ್ರೀ ಮೂಲ ರಾಮದೇವರ ಪೂಜೆ ನೆರವೇರಿಸಿ ಸೋಮವಾರ ಅನುಗ್ರಹ ಸಂದೇಶ ನೀಡಿದರು. ಕಷ್ಟವೆಂದು ನಂಬಿ ಬರುವ ಭಕ್ತರಿಗೆ ಜಾತಿ, ಮತ, ಪಂಥ, ಭೇದವಿಲ್ಲದೆ ರಾಯರು ಅನುಗ್ರಹಿಸುತ್ತಾ ಬಂದಿದ್ದಾರೆ. ಭಕ್ತರು ರಾಯರಲ್ಲಿ ಕಷ್ಟಗಳನ್ನು ನಿವೇದಿಸಿಕೊಂಡು ಪರಿಹಾರ ಪಡೆಯುತ್ತಿದ್ದಾರೆ ಎಂದು ತಿಳಿಸಿದರು. ಶ್ರೀಗಳಿಗೆ ತುಲಾಭಾರ ಸೇವೆ ನಡೆಯಿತು.

ಸಾರೋಟಿನಲ್ಲಿ ಭವ್ಯ ಮೆರವಣಿಗೆ

ವಿದ್ಯಾಭಾರತಿ ಶಾಲೆಯಿಂದ ವಾಸವಿ ದೇವಸ್ಥಾನದವರೆಗೆ ಶೋಭಯಾತ್ರೆ ನಡೆಸಿ ಸುಬುಧೇಂದ್ರ ತೀರ್ಥರನ್ನು ಸಾರೋಟಿನಲ್ಲಿ ಭವ್ಯ ವಾದ ಮೆರವಣಿಗೆ ಮಾಡಲಾಯಿತು. ಪೂರ್ಣ ಕುಂಭ ಸ್ವಾಗತ ನೀಡಲಾಯಿತು.

ಪ್ರಮುಖರಾದ ಆರ್.ಮೇಲಯ್ಯ ಶೆಟ್ಟಿ, ಎಂ.ಮಲ್ಲಿಕಾರ್ಜುನಗೌಡ, ಬಸವರಾಜ ನಾಡಗೌಡ, ಸೋಮನಗೌಡ, ಮಹಾಂತೇಶ ಗುಜ್ಜಲ, ಬಸವರಾಜಪ್ಪ, ಮಹಾಂತೇಶ, ಶರ್ಫುದ್ದೀನ್ ಪೋತ್ನಾಳ, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net