ಕುಂತೂರು ಭಜನಾ ಮಂದಿರಕ್ಕೆ ಸಹಾಯಧನ

New Project (5)
Published on

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ವತಿಯಿಂದ ಕಡಬ ತಾಲೂಕಿನ ಕುಂತೂರು ಶ್ರೀ ಶಾರದಾ ಭಜನಾ ಮಂದಿರದ ಕಟ್ಟಡ ನಿರ್ವಾಣಕ್ಕೆ ಮಂಜೂರಾದ 1,50,000 ರೂ. ಸಹಾಯಧನ ಮಂಜೂರಾತಿ ಪತ್ರ ವಿತರಣೆ ಭಜನಾ ಮಂದಿರದಲ್ಲಿ ನಡೆಯಿತು.

ಯೋಜನೆಯ ದ.ಕ. ಜಿಲ್ಲಾ 2 ನಿರ್ದೇಶಕ ಪ್ರವೀಣ್ ಕುವಾರ್ ಮಂಜೂರಾತಿ ಪತ್ರ ವಿತರಿಸಿದರು. ಭಜನಾ ಮಂಡಳಿಯ ಅಧ್ಯಕ್ಷ ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಪೆರಾಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ, ಕಡಬ ತಾಲೂಕು ಭಜನಾ ಪರಿಷತ್‌ನ ಪದಾಧಿಕಾರಿ ನಾಗಪ್ಪ ಗೌಡ, ಭಜನಾ ಪರಿಷತ್‌ನ ಸಮನ್ವಯಾಧಿಕಾರಿ ಸಂತೋಷ್, ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು, ಮೇಲ್ವಿಚಾರಕಿ ಸುಜಾತಾ ಮೊದಲಾದವರಿದ್ದರು. ಭಜನಾ ಮಂಡಳಿಯ ಸದಸ್ಯ ಚೆನ್ನಕೇಶವ ನಿರೂಪಿಸಿದರು. ಸೇವಾ ಪ್ರತಿನಿಧಿ ಸವಿತಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net