

ಸುಬ್ರಹ್ಮಣ್ಯ: ಕಂಚಿ ಕಾಮಕೋಟಿ ಪೀಠದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು.
ಕಂಚಿ ಶ್ರೀಗಳನ್ನು ವೇದಘೋಷದೊಂದಿಗೆ ಸ್ವಾಗತಿಸಲಾಯಿತು. ಬಳಿಕ ಸುಬ್ರಹ್ಮಣ್ಯಶ್ರೀಗಳು ಕಂಚಿಶ್ರೀಗಳಿಗೆ ಶಾಲು ಹಾಕಿ ಹಾರ ತೊಡಿಸಿ ಫಲ ಮಂತ್ರಾಕ್ಷತೆ ನೀಡಿದರು. ಕಂಚಿಶ್ರೀ ಸುಬ್ರಹ್ಮಣ್ಯಶ್ರೀಗಳಿಗೆ ಹಾರ ಹಾಕಿ ಪ್ರಸಾದ ನೀಡಿದರು. ಮಠದ ದಿವಾನ ಸುದರ್ಶನ ಜೋಯಿಸ, ಮಠದ ಪುರೋಹಿತರು, ಭಕ್ತರು ಉಪಸ್ಥಿತರಿದ್ದರು.