ನಿರ್ಣಾಯಕ ಹಂತಕ್ಕೆ ತಲುಪಿದ ತನಿಖೆ: ಪಳ್ಳಿಕೆರೆ ಪೂಚಕ್ಕಾಡ್‌ನಲ್ಲಿ ಉದ್ಯಮಿಯ ನಿಗೂಢ ಸಾವು ಪ್ರಕರಣ

New Project (63)
Published on

ಕಾಸರಗೋಡು: ಪಳ್ಳಿಕೆರೆ ಪೂಚಕ್ಕಾಡ್‌ನಲ್ಲಿ ಅನಿವಾಸಿ ಭಾರತೀಯನ ನಿಗೂಢ ಸಾವಿಗೆ ಸಂಬಂಧಿಸಿದ ಪ್ರಕರಣದ ತನಿಖೆ ನಿರ್ಣಾಯಕ ಹಂತಕ್ಕೆ ತಲುಪಿದೆ. ಅನಿವಾಸಿ ಉದ್ಯಮಿಯಾಗಿದ್ದ ಪೂಚಕ್ಕಾಡ್‌ನ ಎಂ.ಸಿ.ಅಬ್ದುಲ್ ಗಫೂರ್(55) 2023 ಏಪ್ರಿಲ್ 14ರಂದು ಮುಂಜಾನೆ ಮನೆಯ ಬೆಡ್‌ರೂಂನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಹಜ ಸಾವು ಎಂಬ ನೆಲೆಯಲ್ಲಿ ಶವವನ್ನು ದಫನ ಮಾಡಲಾಗಿತ್ತು. ಬಳಿಕ ಸಾವಿನಲ್ಲಿ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.

ಮೊದಲು ಸ್ಥಳೀಯ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದಾದರೂ ಬಳಿಕ ಕ್ರಿಯಾ ಸಮಿತಿಯ ಒತ್ತಡದಿಂದ ಜಿಲ್ಲಾ ಕ್ರೈಂ ಬ್ರಾಂಚ್‌ಗೆ ತನಿಖೆ ಹಸ್ತಾಂತರಿಸಲಾಗಿತ್ತು. ಹೆಚ್ಚಿನ ಪ್ರಗತಿ ಕಂಡು ಬರದ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಅವರ ನಿರ್ದೇಶನ ಪ್ರಕಾರ ಡಿಸಿಆರ್‌ಬಿ ಡಿವೈಎಸ್ಪಿ ಜೋನ್ಸನ್ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ತಂಡ ರಚಿಸಲಾಗಿತ್ತು. ತನಿಖೆಯ ಭಾಗವಾಗಿ 40ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ. ಇದರಿಂದ ಅಬ್ದುಲ್ ಗಫೂರ್‌ರ ಸಾವಿಗೆ ಸಂಬಂಧಿಸಿ ನಿರ್ಣಾಯಕ ಮಾಹಿತಿ ಲಭಿಸಿದೆಯೆನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net