

ಬೆಳ್ತಂಗಡಿ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಮತ್ತು ಸಂಸ್ಕೃತ ಅಂತರಾಧ್ಯಯನ ವೃತ್ತಂ ಅವುಗಳ ಪದಾಧಿಕಾರಿಗಳ ಪದ ಪ್ರದಾನ ಕಾರ್ಯಕ್ರಮದ ಸಂದರ್ಭದಲ್ಲಿ ಸಂಸ್ಕೃತ ವಿಭಾಗದ ಡಿಜಿಟಲ್ ಭಿತ್ತಿಪತ್ರಿಕೆ ಸುಬೋಧಿನಿಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಕಲಾ ನಿಕಾಯದ ಡೀನ್ ಹಾಗೂ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ಭಟ್ ಅನಾವರಣಗೊಳಿಸಿದರು.
ಶ್ರೀ ಧ.ಮ. ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಹಾಗೂ ಸುಬೋಧಿನಿ ಡಿಜಿಟಲ್ ಭಿತ್ತಿಪತ್ರಿಕೆಯ ಪ್ರಧಾನ ಸಂಪಾದಕ ಡಾ.ಪ್ರಸನ್ನ ಕುಮಾರ ಐತಾಳ್, ವಿದ್ಯಾರ್ಥಿ ಸಂಪಾದಕ್ಟಅದ ವಿಜ್ಞಾನ ವಿಭಾಗದ ಶಮಂತ್ ರಾಜ್ ಕಕ್ಯಪದವು, ವಾಣಿಜ್ಯಶಾಸ್ತ್ರ ವಿಭಾಗದ ಭಾರ್ಗವಿ ಆರ್.ಭಟ್, ಕಲಾ ವಿಭಾಗದ ಶ್ರೇಯಾ ಎಚ್.ಎ.ಹಾಗೂ ಸಂಸ್ಕೃತ ಸಂಘದ ಅಧ್ಯಕ್ಷ ಗುರುದತ್ತ ಮರಾಠೆ, ಉಪಾಧ್ಯಕ್ಷೆ ವೈಷ್ಣವಿ ಭಟ್ ಉಪಸ್ಥಿತರಿದ್ದರು.