ಸ್ವಚ್ಛ ಮನೆ ಸ್ವಯಂ ಘೋಷಣೆ ಪತ್ರ ಸಲ್ಲಿಕೆ : ನರಿಂಗಾನದಲ್ಲಿ ಶೂನ್ಯ ತ್ಯಾಜ್ಯ,ಕಸಮುಕ್ತ ಗ್ರಾಮ ನಿರ್ಮಾಣಕ್ಕೆ ಪಣ

NARINGANA
Published on

ಉಳ್ಳಾಲ: ನರಿಂಗಾನ ಗ್ರಾ.ಪಂ.ನ ಏಳು ಮಂದಿ ಆಶಾ ಕಾರ್ಯಕರ್ತೆಯರು ತಮ್ಮ ಮನೆಗಳಲ್ಲಿ ಸೃಷ್ಟಿಯಾಗುವ ಹಸಿ, ಒಣ, ಅಪಾಯಕಾರಿ ಕಸ ವಿಂಗಡಿಸಿ ಸಮರ್ಪಕ ನಿರ್ವಹಿಸುವ ಬಗ್ಗೆ ಖಾತ್ರಿಪಡಿಸುವ ಸ್ವಚ್ಛ ಮನೆ ಸ್ವಯಂ ಘೋಷಣಾಪತ್ರಗಳನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸಿ ಶೂನ್ಯ ಕಸ ನಿರ್ವಹಣೆ, ಕಸ ಮುಕ್ತ ಗ್ರಾಮ ನಿರ್ವಾಣ ಕಾರ್ಯಾಚರಣೆಗೆ ಪಣ ತೊಟ್ಟಿದ್ದಾರೆ.

ಗಾಂಧಿ ಜಯಂತಿಯಂದು ಗ್ರಾ.ಪಂ.ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೈಗೊಂಡ ಸಂಕಲ್ಪದಂತೆ ಆಶಾ ಫೆಸಿಲಿಟೇಟರ್ ಚಂದ್ರಕಲಾ, ಕಾರ್ಯಕರ್ತೆಯಾದ ಸುಮತಿ, ಕವಿತಾ, ಶಾಲಿನಿ, ವಿಮಲಾ, ಸುಮನಾ, ಶಕಿಲಾ ಅವರು ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ನವಾಝ್‌ಗೆ ‘ಸ್ವಚ್ಛ ಮನೆ ಸ್ವಯಂ ಘೋಷಣಾ ಪತ್ರ’ ಸಲ್ಲಿಸಿದ್ದರು.

ಘೋಷಣಾ ಪತ್ರವನ್ನು ಸ್ವೀಕರಿಸಿದ ನವಾಝ್ ವಾತನಾಡಿ, ಶೂನ್ಯ ಕಸ ನಿರ್ವಹಣೆ, ಕಸ ಮುಕ್ತ ಗ್ರಾಮ ನಿರ್ವಾಣ ಕಾರ್ಯಾಚರಣೆ ಆಶಾ ಕಾರ್ಯಕರ್ತೆಯರಿಂದಲೇ ಆರಂಭವಾಗಿರುವುದು ಆಶಾದಾಯಕ ಬೆಳವಣಿಗೆ ಎಂದರು.

ನರೇಗಾ ವಾಜಿ ಒಂಬುಡ್ಸ್‌ಮೆನ್ ಶೀನ ಶೆಟ್ಟಿ ಶೂನ್ಯ ಕಸ ನಿರ್ವಹಣೆ ಕುರಿತು ವಾಹಿತಿ ನೀಡಿ ಸಂವಾದ ನಡೆಸಿದರು. ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಮಟ್ಟದ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಗ್ರಾಮ ಆರೋಗ್ಯ ನೈರ್ಮಲ್ಯ, ಬಾಲ ವಿಕಾಸ ಶಾಲಾ ಅಭಿವೃದ್ಧಿ ಸಮಿತಿಗಳು, ಯುವಕ ಮಂಡಲ, ಮಹಿಳಾ ಮಂಡಲ, ಸೀ ಶಕ್ತಿ, ಸ್ವಸಹಾಯ ಸಂ, ಸ್ಥಳೀಯ ಸಂಸಂಸ್ಥೆಗಳ ಸದಸ್ಯರನ್ನು ಒಳಗೊಂಡ ವಾರ್ಡ್‌ಮಟ್ಟದ ಕಾರ್ಯಪಡೆಗಳನ್ನು ರಚಿಸಿ ಮನೆಗಳಿಗೆ ನಿರಂತರ ಭೇಟಿ, ಮನೆಯಂಗಳ ವಾಹಿತಿ, ಜನ ಜಾಗತಿ, ಜಾಥಾ, ವಾಹಿತಿ, ಶಿಕ್ಷಣ, ಸಂವಹನ ಕಾರ್ಯಕ್ರಮಗಳ ಮೂಲಕ ಪ್ರತೀ ಮನೆ, ವಾಣಿಜ್ಯ ಕಟ್ಟಡ, ಶೈಕ್ಷಣಿಕ, ಧಾರ್ಮಿಕ ಕೇಂದ್ರಗಳಲ್ಲಿ ಹಸಿ, ಒಣ, ಅಪಾಯಕಾರಿ ಕಸ ವಿಂಗಡಣೆ ಮತ್ತು ನಿರ್ವಹಣೆ ವ್ಯವಸ್ಥೆ ವಾಡಿಸುವ ವಿಶೇಷ ಕಾರ್ಯಾಚರಣೆ ನಡೆಯಲಿದೆ. ಜನಶಿಕ್ಷಣ ಟ್ರಸ್ಟ್, ಯೇನೆಪೊಯ, ಹೋಮಿಯೋಪಥಿಕ್, ಆಯುರ್ವೇದ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ, ವೈದ್ಯಕೀಯ ಕಾಲೇಜು ಕಾರ್ಯಾಚರಣೆಗೆ ಕೈಜೋಡಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net