ಚರಕದಿಂದ ನೂಲು ತೆಗೆದ ಮಕ್ಕಳು

2..npk -2
Published on

ನಾಪೋಕ್ಲು: ಇಲ್ಲಿಗೆ ಸಮೀಪದ ಕಾಟಕೇರಿಯ ಹರ್ ಮಂದಿರ್ ಶಾಲೆ ವತಿಯಿಂದ ಸೋಮವಾರ ಮಹಾತ್ಮ ಗಾಂಧೀ ಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಾಪೋಕ್ಲು ಮಹಿಳಾ ಸಮಾಜದಲ್ಲಿ ಸಾರ್ವಜನಿಕರಿಗಾಗಿ ಚರಕದಿಂದ ನೂಲು ತೆಗೆಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಮಾತನಾಡಿ, ಗಾಂಧೀಜಿ ಬ್ರಿಟಿಷರನ್ನು ಅವಲಂಬಿಸದೆ ಸ್ವದೇಶಿ ಚಳವಳಿ ಆರಂಭಿಸಿದರು. ಸ್ವಾವಲಂಬಿ ಬದುಕಿನಿಂದ ಮುಂದಿನ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂಬ ಅಭಿಪ್ರಾಯ ಹೊಂದಿದ್ದರು ಎಂದರು.


ಮಹಿಳಾ ಸಮಾಜದ ನಿರ್ದೇಶಕಿ ಪುಲ್ಲೆರ ಪದ್ಮಿನಿ, ಕಾರ್ಯದರ್ಶಿ ರಾಜೇಶ್ವರಿ, ಕೃಷಿ ಇಲಾಖೆ ಸಿಬ್ಬಂದಿ ಸಾಗರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಮುಖರಾದ ಶರವಣ, ದಿನೇಶ್ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net