

ಅರಸೀಕೆರೆ ಗ್ರಾಮಾಂತರ: ವಿದ್ಯಾರ್ಥಿಗಳು ಜ್ಞಾನ ಪಡೆಯುವಲ್ಲಿ ಹೆಚ್ಚಿನ ಒತ್ತು ನೀಡಬೇಕೆಂದು ಬೃಹನ್ಮಠ ಸಿರಿಗೆರೆ ಶಾಖಾಮಠದ ಹರಳಕಟ್ಟ ಮಠದ ಪೀಠಾಧಿಪತಿ ಶ್ರೀ ಶಿವಪ್ರಕಾಶ ಸ್ವಾಮೀಜಿ ಹೇಳಿದರು.
ನಗರದ ಸಂತ ಸೇವಾಲಾಲ್ ಭವನದಲ್ಲಿ ಆಯೋಜಿಸಿದ್ದ ತರಳಬಾಳು ತಾಲೂಕು ನೌಕರರ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು ಮಕ್ಕಳ ಪ್ರತಿಭೆ ಗುರುತಿಸಿ ಅವರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಗಮನಹರಿಸಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾದು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಹಿರಿಯೂರು ರೇವಣ್ಣ, ನಾವು ಮಕ್ಕಳಿಗೆ ಆಸ್ತಿ ಮಾಡುವುದರ ಬದಲು ಮಕ್ಕಳಿಗೆ ಜ್ಞಾನ ಸಂಪತ್ತು ನೀಡಿದರೆ ಸಮಾಜಕ್ಕೆ ಹಾಗೂ ಮನೆಗೆ ಬೆಳಕಾಗುತ್ತಾರೆ ಎಂದರು.
ವೇದಿಕೆಯಲ್ಲಿ ಬೆಂಗಳೂರಿನ ಆದಾಯ ಇಲಾಖೆ ಸಹಾಯಕ ಆಯುಕ್ತ ದರ್ಶನ್ ಕುಮಾರ್, ಮಕ್ಕಳ ತಜ್ಞ ರವಿವರ್ಮ, ಜಿ.ವಿ. ಬಸವರಾಜು, ನೆಹರು ಗಾಂಧಿ, ಭೂಸೇನೆಯ ಕ್ಯಾಪ್ಟನ್ ಶಿವ ಪ್ರಸಾದ್, ಕೆಪಿಎಸ್ ಕಾಲೇಜಿನ ಕಾರ್ಯದರ್ಶಿ ಸಚ್ಚಿದಾನಂದ, ಮಧು, ಮೃತ್ಯುಂಜಯ, ಕುಮಾರ್, ಸಿದ್ದಪ್ಪ, ನವೀನ್ ಕುಮಾರ್, ಓಂಕಾರ್ ಮೂರ್ತಿ, ಕಲ್ಲಳ್ಳಿ ಮಹೇಶ್, ರವಿ ಇತರರಿದ್ದರು.