

ಚಿಂತಾಮಣಿ : ಹಳೇ ಸಂಪ್ರದಾಯಗಳಲ್ಲಿ ಜಾನಪದ ಸಂಸ್ಕೃತಿ ಸಹ ಒಂದಾಗಿದ್ದು, ಮುಂದಿನ ಪೀಳಿಗೆಯ ಅರಿವಿಗಾಗಿ ಜಾನಪದ ಉತ್ಸವ ಹಮ್ಮಿಕೊಳ್ಳುವ ಸಂಪ್ರದಾಯ ಮುಂದುವರಿಯಬೇಕು ಎಂದು ನಗರಸಭೆ ಅಧ್ಯಕ್ಷ ಆರ್.ಜಗನ್ನಾಥ್ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಜಾನಪದ ಉತ್ಸವ 2025 - ನಮ್ಮಸಂಸ್ಕೃತಿ ನಮ್ಮ ಹೆಮ್ಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೇದಿಕೆ ಮುಂಭಾಗದಲ್ಲಿ ನಮ್ಮ ಜಾನಪದ ವಸ್ತುಗಳ ಪ್ರದರ್ಶನ ನೋಡಿದರೆ ಹಿರಿಯರು ಬಳಸುತ್ತಿದ್ದ ವಸ್ತುಗಳ ಪರಿಚಯವಾಗುತ್ತದೆ. ಜತೆಗೆ ಆ ವಸ್ತುಗಳ ಉಪಯೋಗ ಮತ್ತು ಮಹತ್ವವನ್ನು ತಿಳಿಯಬಹುದಾಗಿದೆ. ಪ್ರಸ್ತುತ ಈ ವಸ್ತುಗಳ ಬಳಕೆ ಕಾಣದಾಗಿದೆ. ಆದರೂ ವಿದ್ಯಾರ್ಥಿಗಳು ಹಳೇ ಸಂಸ್ಕೃತಿ ಮತ್ತು ಕಲೆಗಳನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ಇಂತಹ ವಸ್ತುಗಳನ್ನು ಸಂರಕ್ಷಿಸಿರುವುದು ಸಂತಸವಾಗಿದೆ ಎಂದರು.
ನಿವೃತ್ತ ಶಿಕ್ಷಕ ವೆಂಕಟರವಣಪ್ಪ, ಪ್ರಾಂಶುಪಾಲೆ ಪ್ರೊ. ಡಿ.ವಿ. ಕುಸುಮಾ ಮಂಗಳಾ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಜಿತೇಂದ್ರ ಮಾತನಾಡಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ.ಎಚ್.ಎಸ್.ಕವಿತಾ,ಐಕ್ಯೂಎಸಿ ಸಂಚಾಲಕ ಪ್ರೊ. ಶಿವಶಂಕರ್ ಪ್ರಸಾದ್, ಸಹಾಯಕ ಪ್ರಾಧ್ಯಾಪಕರಾದ ಮುನೇಗೌಡ, ಮಹಬೂಬಾ ಪಾಷಾ ಇತರರು ಇದ್ದರು.
ವೇದಿಕೆಯಲ್ಲಿ ರಾಗಿಯ ರಾಶಿ ಹಾಕಿ ಅದರ ಸುತ್ತಲೂ ಹೂವು ಹಾಗೂ ಕಬ್ಬಿನ ಜಲ್ಲೆಯಿಂದ ಅಲಂಕರಿಸಿ ದೀಪ ಬೆಳಗಿಸಲಾಯಿತು. ಅತಿಥಿಗಳಿಗೆ ಮಂಗಳ ವಾದ್ಯದೊಂದಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು.