ವಿದ್ಯಾರ್ಥಿಗಳು ಉನ್ನತ ಗುರಿ ಇಟ್ಟುಕೊಳ್ಳಿ

hbr
Published on

ಹೆಬ್ರಿ: ಚಾರ್ಟೆಡ್ ಅಕೌಂಟೆಡ್ ಪೂರ್ಣಗೊಳಿಸಿದವರಿಗೆ ದೇಶದಲ್ಲಿ ಅದ್ಭುತ ಉದ್ಯೋಗಾವಕಾಶಗಳಿವೆ. ಸವಾಜದಲ್ಲಿ ಸಾಕಷ್ಟು ಗೌರವ ಕೂಡ ಸಿಗುತ್ತಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿ ಇಟ್ಟುಕೊಂಡು ಸಿಎ ಮತ್ತು ಸಿಎಸ್ ಕೋರ್ಸ್‌ಗಳನ್ನು ವಾಡುವುದರ ಬಗ್ಗೆ ಗಮನಹರಿಸಿ ಎಂದು ಸಿಎ ದಾಮಿನಿ ರಾವ್ ಹೇಳಿದರು.

ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಕಾಮರ್ಸ್ ಅಸೋಸಿಯೇಷನ್ ವತಿಯಿಂದ ನಡೆದ ಸಿಎ ದಿನಾಚರಣೆ ಕಾರ್ಯಕ್ರಮಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಸಿಎ ಫೌಂಡೇಶನ್ ಮತ್ತು ಸಿಎಸ್ ಇಇಟಿಯ ಕಾರ್ಯಾಗಾರ ನಡೆಯಿತು. ಪ್ರಾಂಶುಪಾಲ ಪ್ರಕಾಶ್ ಜೋಗಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್‌ಕುವಾರ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸುಮಿತಾ ಸ್ವಾಗತಿಸಿದರು. ಪೃಥ್ವಿ ವಂದಿಸಿದರು. ವಿನಯ್ ಶೆಣೈ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net