ವಿದ್ಯಾರ್ಥಿಗಳು ಸೌಜನ್ಯದಿಂದ ವರ್ತಿಸಿ

FotoJet
Published on

ಕುದೂರು: ಹೋಬಳಿಯ ಬೆಟ್ಟಹಳ್ಳಿ ಕಾಲನಿ ಸರ್ಕಾರಿ ಶಾಲೆಯಲ್ಲಿ ಶನಿವಾರ ಮಕ್ಕಳಿಗೆ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಶಿಕ್ಷಕ ರಘುಪತಿ ಮಾರ್ಗದರ್ಶನದಲ್ಲಿ ‘ಅಂಗವಿಕಲರೊಂದಿಗೆ ಸಂವಹನ’ ಶೀರ್ಷಿಕೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಹೌದು ಅಥವಾ ಇಲ್ಲ ಹೇಳುವ ಚಟುವಟಿಕೆ, ನಿನ್ನ ಮಾರ್ಗ ತಿಳಿ, ನೀವು ನೋಡಿರುವುದನ್ನು ಹೇಳಿ ಹೀಗೆ ನಾನಾ ಚಟುವಟಿಕೆಗಳನ್ನು ಮಾಡಿಸಿ ನಂತರ ಮಕ್ಕಳಿಗೆ ಕೆಲವು ಗ್ರಾಮೀಣ ಮನರಂಜನಾ ಆಟಗಳನ್ನು ಆಡಿಸಲಾಯಿತು.

ಮುಖ್ಯಶಿಕ್ಷಕ ರಘುಪತಿ ಮಾತನಾಡಿ, ವಿದ್ಯಾರ್ಥಿಗಳು ಅಂಗವಿಕಲರೊಂದಿಗೆ ಸೌಜನ್ಯದಿಂದ ವರ್ತಿಸಿ ಅವರಿಗೆ ಸದಾ ಸಹಕಾರಿಯಾಗಿರಬೇಕು. ಅವರಲ್ಲಿನ ಹಿಂಜರಿಕೆ ಮನೋಭಾವ ದೂರ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಅಡುಗೆ ಸಿಬ್ಬಂದಿ ಚಿಕ್ಕ ತಾಯಮ್ಮ, ಶಾಲಾ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳಾದ ಶಶಿಕುಮಾರ್, ದರ್ಶನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net