ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮುನ್ನಡೆಯಿರಿ

ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮುನ್ನಡೆಯಿರಿ
Published on

ಬೆಟ್ಟದಪುರ: ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ನಿವೃತ್ತ ಸೈನಿಕ ಹಾಗೂ ಗೋಣಿಕೊಪ್ಪಲು ಅಕ್ಷಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕುದುಕುಳಿ ಕೆ.ಸೋಮಯ್ಯ ಹೇಳಿದರು.

ಬೆಟ್ಟದಪುರದ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಿದ್ಯಾರ್ಥಿ ಸಂಸತ್ ಹಾಗೂ ಕ್ರೀಡಾ ಕ್ಲಬ್ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆತ್ಮವಿಶ್ವಾಸ ಇಲ್ಲದವರು ಏನನ್ನೂ ಸಾಧಿಸಲಾರರು. ಅವರು ಯಾವುದರಲ್ಲಿ ಮುಂದೆ ಬರಲಾರರು.

ದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ವಿದ್ಯಾಸಂಸ್ಥೆಗಳ ಆಧಾರ ಸ್ತಂಭಗಳು. ಊರಿನ ಆಭರಣದಂತಿರುವ ವಿದ್ಯಾಸಂಸ್ಥೆಗಳನ್ನು ಬೆಳೆಸುವುದು ಈ ಆಧಾರ ಸ್ತಂಭಗಳ ಪ್ರಮುಖ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಗೋಣಿಕೊಪ್ಪಲಿನ ರಾಷ್ಟ್ರೀಯ ಕ್ರೀಡಾಪಟು ಪಡಿಕಲ್ ಕುಸುಮಾವತಿ ಮಾತನಾಡಿ, ಸಣ್ಣವಯಸ್ಸಿನಲ್ಲಿ ಉನ್ನತವಾದದ್ದನ್ನು ಸಾಧಿಸಲು ಕನಸು ಕಾಣಬೇಕು. ಶ್ರಮದಿಂದ ಏನನ್ನಾದರೂ ಸಾಧಿಸಬಹುದು ಹೊರತು ಸೋಮಾರಿತನದಿಂದ ಅಲ್ಲ ಎಂದು ಹೇಳಿದರು.

ಸಮಾಜ ಸೇವಕ ಪುಳಿಂಜನ ಪೂವಯ್ಯ ಮಾತನಾಡಿ, ನಾವು ಒಳ್ಳೆಯದನ್ನು ಮಾಡಿದರೆ ನಮ್ಮ ಬದುಕು ಹಸನಾಗುತ್ತದೆ. ನಮ್ಮ ಮಕ್ಕಳಿಗೂ ಒಳ್ಳೆಯದಾಗುತ್ತದೆ. ಯಾವತ್ತು ಒಳ್ಳೆಯದನ್ನೇ ಚಿಂತಿಸಿ ಒಳ್ಳೆಯದನ್ನೇ ಮಾಡಬೇಕು ಎಂದು ತಿಳಿವಳಿಕೆ ಹೇಳಿದರು.

ಕಾರ್ಯಕ್ರಮದಲ್ಲಿ ಕಳೆದ ವರ್ಷದ ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಕಾಲೇಜಿನ ಐವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಸಂಸತ್ ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧನೆ ಮಾಡಲಾಯಿತು.

ರಂಗಭೂಮಿ ಕಲಾವಿದ ಭರಮಣ್ಣ ಬೆಟ್ಟಗೇರಿ, ಮಾನವ ಟ್ರಸ್ಟ್ ಅಧ್ಯಕ್ಷ ಅಪ್ಪಣ್ಣ, ನಿವೃತ್ತ ಮುಖ್ಯಶಿಕ್ಷಕ ಸಣ್ಣ ಸ್ವಾಮಿಗೌಡ, ಶಿವಣ್ಣ ಕರಡಿಪುರ, ಪಾಲಕರಾದ ಗೋವಿಂದೇಗೌಡ, ಕೃಷ್ಣಸ್ವಾಮಿ, ಕಾಲೇಜಿನ ಕಾರ್ಯದರ್ಶಿ ಡಾ.ಜೆ ಸೋಮಣ್ಣ, ಟ್ರಸ್ಟಿಗಳಾದ ಟಿ.ಆರ್. ಶಕುಂತಲಾ, ಟಿ.ಆರ್. ಸತೀಶ್ ಕುಮಾರ್, ಉಪನ್ಯಾಸಕರಾದ ಬಸವರಾಜು, ಅರ್ಪಿತಾ, ಸುಧಾ, ನವೀನ್ ಕುಮಾರ್, ವಿದ್ಯಾರ್ಥಿ ನಾಯಕರಾದ ಶ್ರಾವ್ಯ, ಅರ್ಚನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net