ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲಿ

22RAM-1
Published on

ರಾಮದುರ್ಗ: ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳುವ ಜತೆಗೆ ಶಿಕ್ಷಕರ ಮಾರ್ಗದರ್ಶನ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿರಕ್ತಮಠ ಟ್ರಸ್ಟ್ ಅಧ್ಯಕ್ಷ ಪ್ರದೀಪ ಪಟ್ಟಣ ಹೇಳಿದರು.

ಪಟ್ಟಣದ ಕ್ಯಾಂಬ್ರಿಡ್ಜ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಅಂಕ ಗಳಿಕೆ ಅಷ್ಟೇ ಪ್ರಾಮುಖ್ಯವಲ್ಲ. ಮಕ್ಕಳ ಆಸಕ್ತಿ, ಅಭಿರುಚಿಗೆ ಅನುಗುಣವಾಗಿ ಪ್ರೋತ್ಸಾಹಿಸುವ ಜತೆಗೆ ಸೂಕ್ತ ತರಬೇತಿ ಅಗತ್ಯವಾಗಿದೆ ಎಂದು ಸಲಹೆ ನೀಡಿದರು.

ಶಾಂತವೀರ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಸ್ಥೆ ಅಧ್ಯಕ್ಷ ಮಹಾಂತೇಶ ರೊಕ್ಕದಕಟ್ಟಿ ಮಾತನಾಡಿದರು. ವಾರ್ಷಿಕ ಕ್ರೀಡಾಕೂಟ ಸೇರಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.

ಪ್ರಾಚಾರ್ಯ ಡಾ.ಆರ್.ಎಲ್ ಕುಳ್ಳೂರ, ಮುಖಂಡ ಆರ್.ಬಿ.ರೊಕ್ಕದಕಟ್ಟಿ, ರಿಯಾಜ್ ಮನಿಯಾರ, ಕೃಷ್ಣಾ ಮೇದಾರ, ಶಬ್ಬೀರ್ ಜಕಾತಿ, ರಾಘವೇಂದ್ರ ದೊಡ್ಡಮನಿ, ಸುನೀಲ ಕಾಂಬಳೆ, ಆಡಳಿತಾಕಾರಿ ನಂದಿನಿ ಟಿ., ಮುಖ್ಯಶಿಕ್ಷಕಿ ಶಶಿಕಲಾ ಪಾಟೀಲ ಇತರರಿದ್ದರು. ಶಿಕ್ಷಕಿ ರಹೀಮಾ ದೇಸಾಯಿ ಸ್ವಾಗತಿಸಿದರು. ಸಾಬ್ರೀನ್ ಬೆಣ್ಣಿ ನಿರೂಪಿಸಿದರು. ಅನ್ನಪೂರ್ಣಾ ರಾಠೋಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net