ಎಐ ತಂತ್ರಜ್ಞಾನದಿಂದ ವಿದ್ಯಾರ್ಥಿಗಳಿಗೆ ಪ್ರಯೋಜನ

kota me 12 ecr colleg
Published on

ಕೋಟ: ಶಿಕ್ಷಣ ಕಾಲಕಾಲಕ್ಕೆ ರೂಪಂತರಗೊಳ್ಳಬೇಕು. ಅದೇ ರೀತಿ ಪ್ರಸ್ತುತ ಕಾಲಘಟ್ಟದಲ್ಲಿ ಎ.ಐ. ತಂತ್ರಜ್ಞಾನ ಅತ್ಯಂತ ಅಗತ್ಯವಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಯೋಜನವಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಧುವನದ ಅಚ್ಲಾಡಿಯ ಇ.ಸಿ.ಆರ್. ಗ್ರೂಪ್ ಸಂಸ್ಥೆಯಲ್ಲಿ ಸೋಮವಾರ ಎ.ಐ. ರೋಬೋಟಿಕ್ ಟೀಚರ್ ಶಿಕ್ಷಣ ವ್ಯವಸ್ಥೆಯ ಲೋಕಾರ್ಪಣೆ ಹಾಗೂ ನಸಿರ್ಂಗ್ ವಿದ್ಯಾರ್ಥಿಗಳ ಪ್ರವಾಣವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಮಧು ಭಾಸ್ಕರ್ ವಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಎ.ಐ. ತಂತ್ರಜ್ಞಾನ ಅತ್ಯಂತ ಅಪರೂಪವಾಗಿದ್ದು ನಮ್ಮ ಸಂಸ್ಥೆಯಲ್ಲಿ ಇದನ್ನು ಹಳೇ ವಿದ್ಯಾರ್ಥಿಯೊಬ್ಬರ ಸಹಕಾರದಲ್ಲಿ ರೂಪುಗೊಳಿಸಲಾಗಿದೆ ಎಂದರು.

ರೋಬೋಟಿಕ್ ವ್ಯವಸ್ಥೆ ರೂಪುಗೊಳಿಸಿದ ಸಾಗರ್ ತಂತ್ರಜ್ಞಾನದ ಬಗ್ಗೆ ವಾಹಿತಿ ನೀಡಿದರು. ಬಳಿಕ ನಸಿರ್ಂಗ್ ವಿದ್ಯಾರ್ಥಿಗಳ ಪ್ರವಾಣವಚನ ಕಾರ್ಯಕ್ರಮ ನಡೆಯಿತು.

ಆಶ್ರಿತ ನಸಿರ್ಂಗ್ ಕಾಲೇಜು ಆಡಳಿತ ಮಂಡಳಿ ಟ್ರಸ್ಟಿ ಡಾ.ವಿದ್ಯಾಧರ ಶೆಟ್ಟಿ, ಲಯನ್ಸ್ ಕ್ಲಬ್ ಗವರ್ನರ್ ಸ್ವಪ್ನಾ ಸುರೇಶ್, ಕಾಲೇಜು ಆಡಳಿತ ಮಂಡಳಿ ಟ್ರಸ್ಟಿ ಬಾಲಕೃಷ್ಣ ಶೆಟ್ಟಿ, ಉದ್ಯಮಿ ಕೆ.ಪಿ. ಶೇಖರ್ ಕಾರ್ಕಡ, ಡೈರೆಕ್ಟರ್ ನಿವೇದಾ ಪ್ರಭಾ, ಪ್ರಾಂಶುಪಾಲೆ ಸುಜಾತ ಬೋರ್ಕರ್, ಪ್ರಾಂಶುಪಾಲ ಡಾ.ನೀಲೇಶ್, ಉಪಪ್ರಾಂಶುಪಾಲ ಅಶೋಕ್ ಜೋಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net