ಸ್ಟೂಡೆಂಟ್ಸ್ ಪದವಿ ಪೂರ್ವ ಕಾಲೇಜು ಚಾಂಪಿಯನ್

ಸ್ಟೂಡೆಂಟ್ಸ್ ಪದವಿ ಪೂರ್ವ ಕಾಲೇಜು ಚಾಂಪಿಯನ್
Published on

ಹಾಸನ: ಪದವಿಪೂರ್ವ ಶಿಕ್ಷಣ ಇಲಾಖೆ ಹಾಸನ ಹಾಗೂ ಮೈಲ್ ಸ್ಟೋನ್ ಮಂಗಳ ಕಾಲೇಜು ಆಶ್ರಯದಲ್ಲಿ ನಡೆದ 2025-26ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸ್ಟೂಡೆಂಟ್ಸ್ ಪದವಿ ಪೂರ್ವ ಕಾಲೇಜಿನ ಕಾಮರ್ಸ್ ವಿಭಾಗ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಸತತ ಮೂರು ಬಾರಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದಿದೆ. 2025-26 ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಒಟ್ಟು 103 ಪಾಯಿಂಟ್ಸ್ ಗಳಿಸಿದೆ. ಬಾಲಕಿಯರ ವೈಯಕ್ತಿಕ ಚಾಂಪಿಯನ್ಸ್ ಶಿಪ್‌ಅನ್ನು ರಚನಾ ಕಾರ್ಲೆ ಪಡೆದಕೊಂಡರು. ಬಾಲಕ, ಬಾಲಕಿಯರ ತಂಡ ಸಮಗ್ರ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದೆ. ಬಾಲಕಿಯರ ವಿಭಾಗದಲ್ಲಿ 100 ಮೀಟರ್ ಓಟ ಪ್ರಥಮ, 200 ಮೀ ಪ್ರಥಮ, 400 ಮೀ ದ್ವಿತೀಯ, 800 ಪ್ರಥಮ, 800ಮೀ ದ್ವಿತೀಯ, 1500 ಮೀ ಪ್ರಥಮ, 3000ಮೀ ಪ್ರಥಮ, ಉದ್ದಜಿಗಿತ ತೃತೀಯ, 4್ಡ100 ರಿಲೇ ಪ್ರಥಮ, 4್ಡ400 ಪ್ರಥಮ, ಖೋ ಖೋ ದ್ವಿತೀಯ, ಹ್ಯಾಂಡಬಾಲ್ ದ್ವಿತೀಯ, ಟೆನಿಸ್, ವಾಲಿಬಾಲ್ ದ್ವಿತೀಯ, ಟೇಬಲ್ ಟೆನಿಸ್ ದ್ವಿತೀಯ ಸ್ಥಾನ ಪಡೆಯಿತು.

ಬಾಲಕರ ವಿಭಾಗದಲ್ಲಿ ಖೋ ಖೋ ಪ್ರಥಮ, ಹ್ಯಾಂಡ್ ಬಾಲ್ ಪ್ರಥಮ, 4್ಡ400 ದ್ವಿತೀಯ, ವಾಲಿಬಾಲ್ ದ್ವಿತೀಯ,

ಟೆನಿಸ್, ವಾಲಿಬಾಲ್ ಬಾಲ್ ದ್ವಿತೀಯ ಸ್ಥಾನ ಪಡೆದಿದೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಪಾಲಕರು ಅಭಿನಂದನೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net