ನೆಟ್ಟಾರಿನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

charan1
ಆತ್ಮಹತ್ಯೆಗೈದ ಚರಣ್
Published on

ಸುಳ್ಯ: ತಾಲೂಕಿನ ಬೆಳ್ಳಾರೆ ಗ್ರಾಮದ ನೆಟ್ಟಾರಿನಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ
ಸೋಮವಾರ ನಡೆದಿದೆ.

ಮೃತರನ್ನು ನೆಟ್ಟಾರು ನಿವಾಸಿ ಕಿನ್ನಿಮಜಲು ಹುಕ್ರಪ್ಪ ಎಂಬುವರ ಪುತ್ರ ಚರಣ್ (19) ಎಂದು ಗುರುತಿಸಲಾಗಿದೆ. ಈತ ಸುಳ್ಯದ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net