ಓದು ಎಂದು ಬುದ್ದಿ ಹೇಳಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

IMG-20230825-WA0080
Published on


ಕಲಬುರಗಿ: ಸರಿಯಾಗಿ ಓದುವಂತೆ ಪೋಷಕರು ಬುದ್ದಿ ಹೇಳಿದ್ದರಿಂದ ಸೇಡಂ ತಾಲೂಕಿನ ಕೊಡ್ಲಾ ಗ್ರಾಮದ ವಿದ್ಯಾರ್ಥಿನಿ ಮನನೊಂದು ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸೇಡಂನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕಾವೇರಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.
ಪೋಷಕರು ಪ್ರತಿದಿನವೂ ಕಾಲೇಜಿಗೆ ಹೋಗು,ಚೆÀನ್ನಾಗಿ ಓದು ಎಂದು ತಿಳಿ ಹೇಳುತ್ತಿದ್ದರು. ಇದರಿಂದ ಮನನೊಂದ ಕಾವೇರಿ ಬುಧವಾರ ಮನೆಯಿಂದ ಹೊರ ಹೋಗಿದ್ದಳು.ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಗುರುವಾರ  ಮನೆಯ ಹತ್ತಿರದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿz್ದÁಳೆ. ಈ ಕುರಿತು ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net