ಬೈದಿದ್ದಕ್ಕೆ ಬೇಸರಗೊಂಡು ವಿದ್ಯಾರ್ಥಿ ಆತ್ಮಹತ್ಯೆ

IMG-20230329-WA0074
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ವಿದ್ಯಾರ್ಥಿಯೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಕಿಗೆ ಬಂದಿದೆ. ನಗರದ ಹಳೆಯ ಸಿವಿಲ್ ಹಾಸ್ಪಿಟಲ್ ಸಮೀಪದ ನಿವಾಸಿ ಸುಲೋಕ ಸುಭಾಷ ಚಂಡೇಕರ್(15) ಮೃತ ಬಾಲಕ. ಮಂಗಳೂರಿನ ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ಆತನ ಶವ ಪತ್ತೆಯಾಗಿದೆ.
ಅರಗಾ ಕೇಂದ್ರೀಯ ವಿದ್ಯಾಲಯದ 10 ನೇ ತರಗತಿ ವಿದ್ಯಾರ್ಥಿಯಾಗಿದ್ದ ಆತ ಮಾ. 17 ರಂದು ಸಾಯಂಕಾಲ ಮನೆಯಿಂದ ಕಾಣೆಯಾಗಿದ್ದ. ಆ ಬಗ್ಗೆ ಮಾ.18 ರಂದು ಶಹರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆತನ ಶವ ಮಂಗಳೂರಿನಲ್ಲಿ ಪತ್ತೆಯಾಗಿದ್ದು, ಪಾಲಕರು ಶವವನ್ನು ಗುರುತಿಸಿದ್ದಾರೆ.
ನಾಲ್ಕು ಪರೀಕ್ಷೆ ಬರೆದಿದ್ದ ಆತ ಇನ್ನೆರಡು ಪರೀಕ್ಷೆ ಬರೆಯುವುದು ಬಾಕಿ ಇತ್ತು. ಮನೆಯಲ್ಲಿ ಟಿವಿ ನೋಡುತ್ತಿದ್ದ ಬಾಲಕನಿಗೆ ಓದಿಕೋ ಎಂದು ಬುದ್ದಿವಾದ ಹೇಳಿದ್ದಳು. ಆದರೆ, ಸಿಟ್ಟಿಗೆದ್ದ ಬಾಲಕ ತಾಯಿಯ ತಲೆಗೆ ಹೊಡೆದಿದ್ದ. ನಂತರ ತಂದೆ ಬಂದು ತನಗೆ ಹೊಡೆಯುವ ಭಯ ಮತ್ತು ತಾನು ಮಾಡಿದ ತಪ್ಪಿನಿಂದ ಕುಗ್ಗಿದ ಬಾಲಕ ಮನೆ ಬಿಟ್ಟು ಹೊರಟಿದ್ದ ಎನ್ನಲಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net