ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟಕ್ಕೆ ವಿದ್ಯಾರ್ಥಿ ಮಿತ್ರ ನೆರವು

03-JULY-GPT-4
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಬಲಚವಾಡಿ ಪುಟ್ಟಬಸಪ್ಪ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗ್ರಾಮಪಂಚಾಯಿತಿಯಿಂದ ವಿಜಯವಾಣಿಯ ವಿದ್ಯಾರ್ಥಿಮಿತ್ರ ಸಂಚಿಕೆಗಳನ್ನು ವಿತರಣೆ ಮಾಡಲಾಯಿತು. ಮಹದೇವಸ್ವಾಮಿ, ವೇದಾವತಿ, ನಾಗರಾಜಶರ್ಮನ್, ಮಹೇಶ್, ಕೃಷ್ಣ, ನಾಗರಾಜಪ್ಪ ಇದ್ದರು.
Published on

ಗುಂಡ್ಲುಪೇಟೆ: ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ಪಡೆಯಲು ವಿದ್ಯಾರ್ಥಿ ಮಿತ್ರ ನೆರವಾಗುತ್ತಿದೆ ಎಂದು ತೆರಕಣಾಂಬಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹದೇವಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮದ ಬಲಚವಾಡಿ ಪುಟ್ಟಬಸಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗುರುವಾರ ವಿಜಯವಾಣಿಯ ವಿದ್ಯಾರ್ಥಿಮಿತ್ರ ಸಂಚಿಕೆಗಳನ್ನು ವಿತರಿಸಿ ಅವರು ಮಾತನಾಡಿದರು. ಕನ್ನಡದ ನಂ.1 ದಿನಪತ್ರಿಕೆಯಾದ ವಿಜಯವಾಣಿ ವಿದ್ಯಾರ್ಥಿಗಳ ಅನುಕೂಲಕ್ಕೆ ಹೊರತರುತ್ತಿರುವ ವಿದ್ಯಾರ್ಥಿಮಿತ್ರ ಸಂಚಿಕೆಯು ವಿದ್ಯಾರ್ಥಿಗಳ ಕಲಿಕೆಗೆ ತುಂಬಾ ನೆರವಾಗುತ್ತಿದ್ದು, ಶೈಕ್ಷಣಿಕ ಅಭಿವೃದ್ಧಿಗೆ ಕಾರಣವಾಗುತ್ತಿದೆ. ಇದರಿಂದ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಲು ವಿದ್ಯಾರ್ಥಿಗಳಿಗೆ ತುಂಬಾ ನೆರವಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಶಿಕ್ಷಕ ನಾಗರಾಜಶರ್ಮನ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ಎಂಬುದು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು, ಇದು ಮಕ್ಕಳ ಶಿಕ್ಷಣಕ್ಕೆ ಪ್ರಮುಖ ತಳಹದಿಯಾಗಿದೆ. ಪಾಲಕರೂ ತಮ್ಮ ಮಕ್ಕಳ ಶೈಕ್ಷಣಿಕ ಅಬಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಪಂಚಾಯಿತಿಯು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಎಲ್ಲ ಮಕ್ಕಳಿಗೂ ವಿದ್ಯಾರ್ಥಿ ಮಿತ್ರ ಸಂಚಿಕೆಯನ್ನು ಪರೀಕ್ಷೆಯವರೆಗೂ ತಲುಪುವಂತೆ ಮಾಡಿದೆ. ವಿದ್ಯಾರ್ಥಿಗಳು ದಿನದ ಕನಿಷ್ಟ 20 ನಿಮಿಷ ಇದನ್ನು ಅಧ್ಯಯನ ಮಾಡಿ ಶಾಲೆಗೆ ಒಳ್ಳಯೆ ಫಲಿತಾಂಶ ಬರುವಂತೆ ಮಾಡಬೇಕು ಎಂದು ತಿಳಿಸಿದರು. ಉಪಪ್ರಾಂಶುಪಾಲೆ ವೇದಾವತಿ, ಸಹಶಿಕ್ಷಕರಾದ ಮಹೇಶ್, ನಾಗರಾಜಪ್ಪ, ಕೃಷ್ಣ ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net