ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಅಗತ್ಯ

dj p pura nesara
Published on

ಪರಶುರಾಮಪುರ: ಶಾಲಾ ಹಂತದ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸಿ ಅವರಿಂದಲೇ ಗಿಡ ಮರಗಳನ್ನು ಬೆಳೆಸುವ ಕಾರ್ಯಕ್ಕೆ ಒತ್ತು ನೀಡುವುದು ಉತ್ತಮವಾದ ಕೆಲಸ ಎಂದು ಮುಖ್ಯಶಿಕ್ಷಕ ಎ.ಷಣ್ಮುಖಪ್ಪ ಹೇಳಿದರು.

ಸಮೀಪದ ಪಗಡಲಬಂಡೆ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ, ಸರ್ಕಾರಿ ಪ್ರೌಢಶಾಲೆಯ ಇಕೋಕ್ಲಬ್ ಹಾಗೂ ಶಾಲೆಯ ವಿವಿಧ ಕ್ಲಬ್‌ಗಳ ವತಿಯಿಂದ ಆಯೋಜಿಸಿದ್ದ ಪರಿಸರ ಮಾಹಿತಿ ಜಾಗೃತಿ ಹಾಗೂ ಸಸಿ ನೆಡುವ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಶಾಲೆಯ ವಿವಿಧ ವಿದ್ಯಾರ್ಥಿ ಸಂಘಗಳು ಹಳ್ಳಿಗಾಡಿನ ಜನವಸತಿ ಪ್ರದೇಶಗಳಲ್ಲಿನ ಮಹಿಳೆಯರು, ಮಕ್ಕಳು ಯುವಕ ಯುವತಿಯರಿಗೆ ಶಿಕ್ಷಣ ನೀಡಿ ಅವರಿಗೆ ಸ್ವ ಉದ್ಯೋಗ ಕುಲ ಕಸುಬುಗಳ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಂಡು ಜನರಲ್ಲಿ ಪರಿಸರ ಸಂರಕ್ಷಣೆ ಕುರಿತು ಮನವರಿಕೆ ಮಾಡಿಕೊಡಬೇಕು ಎಂದರು

ಆಂಗ್ಲಭಾಷಾ ಶಿಕ್ಷಕ ಎಲ್.ಹನುಮಂತರಾಯ ಪ್ರಾಸ್ತಾವಿಕ ಮಾತನಾಡಿ, ಸರ್ಕಾರದ ಆಶಯದಂತೆ ಹಳ್ಳಿಗಾಡಿನ ಜನರು ಮತ್ತು ಶಾಲಾ ಮಕ್ಕಳಿಗೆ ಸಸಿಗಳನ್ನು ನೆಟ್ಟು ಪೋಷಿಸುವ ಪರಿಸರ ಸಂರರಕ್ಷಣೆಗೆ ಹೆಚ್ಚು ಒತ್ತು ನೀಡಲು ಸಮುದಾಯದ ಜನರಿಗೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು

ಪ್ರಾಥಮಿಕ ಹಾಗೂ ಪ್ರೌಢಶಾಲಾ ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು. ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಸಂಸತ್ತು ರಚನೆಯ ಹಿನ್ನೆಲೆಯಲ್ಲಿ ಶಾಲಾ ಸಂಸತ್ತಿಗೆ ಚುನಾವಣೆ ನಡೆಯಿತು. ನಂತರ ಪರಿಸರ ಸಂರಕ್ಷಣೆ ಕುರಿತ ಕೆಲ ಚಟುವಟಿಕೆಗಳನ್ನು ಕೈಗೊಂಡು ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಶಿಕ್ಷಕರಾದ ಬಿ.ಎನ್.ಸುಧಾ, ಜೆ.ಎಂ.ವೆಂಕಟೇಶ, ವೀರೇಶ, ಆರ್.ಮಂಜುಳಾ, ವಿದ್ಯಾರ್ಥಿಗಳಾದ ನಂದಿನಿ, ಸುಪ್ರಿಯಾ, ಸಿಂಚನಾ, ಯಮುನಾ, ವಲಯ ಮೇಲ್ವಿಚಾರಕ ರವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net