ಚಿಂತಾಮಣಿ: ತಾಲೂಕಿನ ಮುರಗಮಲ್ಲಾ ಹೋಬಳಿ ಜೋಗ್ಯಾನಹಳ್ಳಿಯಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಬಾಲಕನೊಬ್ಬ ಭಾನುವಾರ ಮೃತಪಟ್ಟಿದ್ದಾನೆ. ನಂದಿಗಾನಹಳ್ಳಿಯ ರವಿ ಮಗ ರಂಜಿತ್ (14)ಮೃತ. ಮುರಗಮಲ್ಲಾ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ರಂಜಿತ್ ವ್ಯಾಸಂಗ ಮಾಡುತ್ತಿದ್ದ. ಆಟವಾಡಲು ಹೋಗಿದ್ದ ನಾಲ್ವರ ಹುಡುಗರ ಪೈಕಿ ಮೂವರು ಗಾಬರಿಯಿಂದ ಬರುತ್ತಿದ್ದನ್ನು ನೋಡಿದ ಗ್ರಾಮದ ನಿವಾಸಿಯೊಬ್ಬರು ಹುಡಗರನ್ನು ಪ್ರಶ್ನಿಸಿದಾಗ ರಂಜಿತ್ ಕೃಷಿ ಹೊಂಡಕ್ಕೆ ಕಾಲು ಜಾರಿ ಬಿದ್ದ ಬಗ್ಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಹೋಗಿ ಕೃಷಿ ಹೊಂಡದಲ್ಲಿ ಬಿದ್ದ ವಿದ್ಯಾರ್ಥಿಯನ್ನು ಮೇಲಕ್ಕೆ ಎತ್ತುವಷ್ಟರಲ್ಲಿ ಆತ ಮೃತಪಟ್ಟಿದ್ದ. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಮತ್ತು ಸರ್ಕಾರಿ ನೌಕರರ ಸಂದ ತಾಲೂಕು ಅಧ್ಯಕ್ಷ ಅಶೋಕ್ ಕುಮಾರ್, ಶಾಲೆಯ ಶಿಕ್ಷಕರು ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದ ಬಳಿ ತೆರಳಿ ಮೃತ ವಿದ್ಯಾರ್ಥಿಯ ಪಾಲಕರಿಗೆ ಸಾಂತ್ವನ ಹೇಳಿದರು.